ಧರ್ಮೋಪದೇಶಕಾಂಡ 2:9 - ಪರಿಶುದ್ದ ಬೈಬಲ್9 “ಯೆಹೋವನು ನನಗೆ ಹೀಗೆ ಹೇಳಿದನು: ‘ಮೋವಾಬಿನ ಜನರಿಗೆ ತೊಂದರೆ ಕೊಡಬೇಡ. ಅವರ ವಿರುದ್ಧ ಯುದ್ಧಕ್ಕೆ ಹೋಗಬೇಡ; ಅವರ ದೇಶದಲ್ಲಿ ನಿಮಗೆ ಯಾವ ಪಾಲೂ ಸಿಗದು. ಅವರು ಲೋಟನ ಸಂತತಿಯವರು. ನಾನು ಅವರಿಗೆ ಆರ್ ಪಟ್ಟಣವನ್ನು ಕೊಟ್ಟಿರುತ್ತೇನೆ.’” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆಗ ಯೆಹೋವನು ನನಗೆ, “ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸ್ವತ್ತನ್ನು ಕೊಡುವುದಿಲ್ಲ” ಎಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆಗ ಸರ್ವೇಶ್ವರ ನನಗೆ, ‘ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸೊತ್ತನ್ನು ಕೊಡುವುದಿಲ್ಲ. ನೀವು ಎದ್ದು ಜೆರೆದ್ ಹಳ್ಳವನ್ನು ದಾಟಬೇಕು.’ ಎಂದು ಆಜ್ಞಾಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆಗ ಯೆಹೋವನು ನನಗೆ - ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವದಕ್ಕೆ ಕೊಟ್ಟಿರುವದರಿಂದ ಅದರಲ್ಲಿ ನಿಮಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನೀವು ಎದ್ದು ಜೆರೆದ್ ಹಳ್ಳವನ್ನು ದಾಟಬೇಕೆಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆಗ ಯೆಹೋವ ದೇವರು ನನಗೆ, “ಮೋವಾಬ್ಯರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ಏಕೆಂದರೆ ನಾನು ಅವರ ದೇಶದಲ್ಲಿ ನಿನಗೆ ಸೊತ್ತನ್ನು ಕೊಡುವುದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಆರ್ ಎಂಬ ಪ್ರದೇಶವನ್ನು ಕೊಟ್ಟೆನಲ್ಲವೇ?” ಎಂದರು. ಅಧ್ಯಾಯವನ್ನು ನೋಡಿ |
ಅವರು ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ಪ್ರದೇಶವನ್ನು ದಾಟಿಹೋಗುವುದಕ್ಕೆ ದಯವಿಟ್ಟು ಅನುಮತಿಕೊಡು’ ಎಂದು ಕೇಳಿಕೊಂಡರು. ಆದರೆ ಎದೋಮಿನ ಅರಸನು ಅವರಿಗೆ ತಮ್ಮ ದೇಶವನ್ನು ದಾಟಿಹೋಗಲು ಅನುಮತಿಕೊಡಲಿಲ್ಲ. ತರುವಾಯ ಅವರು ಮೋವಾಬ್ಯರ ಅರಸನ ಬಳಿಗೆ ಅದೇ ಸಂದೇಶವನ್ನು ಕಳುಹಿಸಿದರು. ಆದರೆ ಮೋವಾಬ್ಯರ ಅರಸನು ಸಹ ಅವರಿಗೆ ಅವರ ದೇಶವನ್ನು ದಾಟಿಹೋಗಲು ಅನುಮತಿ ಕೊಡಲಿಲ್ಲ. ಆದ್ದರಿಂದ ಇಸ್ರೇಲರು ಕಾದೇಶಿನಲ್ಲಿ ನೆಲೆನಿಂತರು.