Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 15:5 - ಪರಿಶುದ್ದ ಬೈಬಲ್‌

5 ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯರಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನೀವು ಅಭಿವೃದ್ಧಿ ಹೊಂದುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಎಚ್ಚರಿಕೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಎಲ್ಲಾ ಆಜ್ಞೆಯನ್ನು ಕಾಪಾಡಿ ನಡೆಯಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 15:5
12 ತಿಳಿವುಗಳ ಹೋಲಿಕೆ  

ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ; ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.


ಆದರೆ ನೀನು ಇನ್ನೊಂದು ವಿಷಯದಲ್ಲಿಯೂ ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು. ನನ್ನ ಸೇವಕನಾಗಿದ್ದ ಮೋಶೆಯು ನಿನಗೆ ಕೊಟ್ಟ ಆಜ್ಞೆಗಳನ್ನು ನೀನು ನಿಶ್ಚಿತವಾಗಿ ಪಾಲಿಸಬೇಕು. ಅವನ ಧರ್ಮೋಪದೇಶವನ್ನೆಲ್ಲಾ ಚಾಚೂತಪ್ಪದೆ ಅನುಸರಿಸಿದ್ದೇ ಆದರೆ ನೀನು ಮಾಡುವ ಎಲ್ಲ ಕಾರ್ಯಗಳಲ್ಲಿ ನಿನಗೆ ಜಯಸಿಗುವುದು ಖಂಡಿತ.


ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು.


ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ.


ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ಈ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ.


ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ಆ ದೇಶಗಳು ನಿಮ್ಮನ್ನು ಆಳವು.


ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ.


ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು