ಧರ್ಮೋಪದೇಶಕಾಂಡ 15:18 - ಪರಿಶುದ್ದ ಬೈಬಲ್18 “ನಿಮ್ಮ ಗುಲಾಮರನ್ನು ಸ್ವತಂತ್ರರಾಗಿ ಬಿಡಬೇಕಲ್ಲಾ ಎಂದು ಬೇಸರಪಡಬೇಡಿ. ಅವರು ಅರ್ಧಕೂಲಿ ತೆಗೆದುಕೊಂಡು ಆರು ವರ್ಷ ನಿಮ್ಮ ಸೇವೆ ಮಾಡಿದ್ದಾರಲ್ಲಾ? ನಿಮ್ಮ ಕಾರ್ಯಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ಸಫಲಪಡಿಸುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ದಾಸನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 “ಗುಲಾಮನನ್ನು ಬಿಡುಗಡೆ ಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ಗುಲಾಮನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲವೆ? ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಸಫಲಗೊಳಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ದಾಸನನ್ನು ಬಿಡುಗಡೆಮಾಡುವದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರುಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನುಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಒಬ್ಬ ಗುಲಾಮನನ್ನು ನಿಮ್ಮಿಂದ ಬಿಡುಗಡೆಯಾಗಿ ಕಳುಹಿಸುವುದು ನಿಮಗೆ ಕಷ್ಟವೆಂದು ಹೇಳಿಕೊಳ್ಳಬಾರದು. ಏಕೆಂದರೆ ಅವನು ಆರು ವರ್ಷ ನಿಮ್ಮ ದಾಸನಾಗಿದ್ದದರಿಂದ ಸಂಬಳದ ಸೇವಕನಿಗಿಂತ ಎರಡಷ್ಟಾಗಿದ್ದನು. ಹೀಗೆ ನಿಮ್ಮ ದೇವರಾದ ಯೆಹೋವ ದೇವರು ನೀವು ಮಾಡುವುದೆಲ್ಲದರಲ್ಲಿಯೂ ನಿಮ್ಮನ್ನು ಆಶೀರ್ವದಿಸುವರು. ಅಧ್ಯಾಯವನ್ನು ನೋಡಿ |