ದಾನಿಯೇಲ 9:5 - ಪರಿಶುದ್ದ ಬೈಬಲ್5 “ಆದರೆ ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ತಪ್ಪುಗಳನ್ನು ಮಾಡಿದ್ದೇವೆ. ನಾವು ನಿನಗೆ ವಿರೋಧವಾಗಿ ದಂಗೆ ಎದ್ದಿದ್ದೇವೆ. ನಾವು ನಿನ್ನ ಆಜ್ಞೆಗಳನ್ನು ಮತ್ತು ಸರಿಯಾದ ನಿರ್ಣಯಗಳನ್ನು ತೊರೆದಿದ್ದೇವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ನಾವು ಪಾಪಾಪರಾಧಗಳನ್ನು ಮಾಡಿ ಕೆಟ್ಟವರಾಗಿ ನಡೆದು ನಿನಗೆ ತಿರುಗಿಬಿದ್ದು ನಿನ್ನ ಆಜ್ಞಾವಿಧಿಗಳನ್ನು ತೊರೆದು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 “ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದುಬಿಟ್ಟಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ನಾವು ಪಾಪಾಪರಾಧಗಳನ್ನು ಮಾಡಿ ಕೆಟ್ಟವರಾಗಿ ನಡೆದು ನಿನಗೆ ತಿರುಗಿಬಿದ್ದು ನಿನ್ನ ಆಜ್ಞಾವಿಧಿಗಳನ್ನು ತೊರೆದು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ನಾವು ಪಾಪಮಾಡಿದ್ದೇವೆ ಮತ್ತು ಅಕ್ರಮಗಳನ್ನು ಮಾಡಿದ್ದೇವೆ. ಕೆಟ್ಟವರಾಗಿ ನಡೆದಿದ್ದೇವೆ ಮತ್ತು ತಿರುಗಿಬಿದ್ದಿದ್ದೇವೆ. ನಿಮ್ಮ ಕಟ್ಟಳೆಗಳನ್ನು ಮತ್ತು ನ್ಯಾಯಗಳನ್ನು ತೊರೆದುಬಿಟ್ಟಿದ್ದೇವೆ. ಅಧ್ಯಾಯವನ್ನು ನೋಡಿ |
ಇಸ್ರೇಲಿನ ಜನರಲ್ಲಿ ಒಬ್ಬರೂ ಸಹ ನಿನ್ನ ಉಪದೇಶವನ್ನು ಪಾಲಿಸಲಿಲ್ಲ. ಅವರೆಲ್ಲರೂ ಅದರಿಂದ ದೂರಾದರು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಶಾಪಗಳ ಮತ್ತು ವಾಗ್ದಾನಗಳ ಬಗ್ಗೆ ಹೇಳಲಾಗಿದೆ. (ಮೋಶೆಯು ದೇವರ ಸೇವಕನಾಗಿದ್ದನು) ಆ ಶಾಪಗಳು ಧರ್ಮಶಾಸ್ತ್ರವನ್ನು ಪಾಲಿಸದಿದ್ದವರಿಗೆ ಆಗುವ ಶಿಕ್ಷೆಯಾಗಿದೆ. ಆ ಎಲ್ಲಾ ಶಿಕ್ಷೆಗಳು ನಮಗೆ ಆಗಿವೆ. ನಾವು ಯೆಹೋವನಾದ ನಿನ್ನ ವಿರುದ್ಧ ಪಾಪ ಮಾಡಿದ್ದರಿಂದ ನಮಗೆ ಹೀಗಾಯಿತು.
ಆಗ ಉಳಿದವರು ಸೆರೆಹಿಡಿಯಲ್ಪಡುವರು. ಅವರು ಪರದೇಶಕ್ಕೆ ಒಯ್ಯಲ್ಪಟ್ಟು ಅಲ್ಲಿ ವಾಸಿಸುವರು. ಅಲ್ಲಿ ಅಳಿದುಳಿದ ಜನರು ನನ್ನನ್ನು ಜ್ಞಾಪಿಸಿಕೊಳ್ಳುವರು ಮತ್ತು ಅವರ ಅಪನಂಬಿಗಸ್ತಿಕೆಯ ಹೃದಯವನ್ನು ನಾನು ಜಜ್ಜಿದೆನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ತಮ್ಮನ್ನು ತಾವೇ ದ್ವೇಷಿಸುವರು. ಹಿಂದಿನ ಕಾಲದಲ್ಲಿ ಅವರು ನನ್ನಿಂದ ದೂರವಾಗಿ ನನ್ನನ್ನು ತ್ಯಜಿಸಿದರು. ತಮ್ಮ ಹೊಲಸು ವಿಗ್ರಹಗಳ ಹಿಂದೆ ಹೋದರು. ಗಂಡನನ್ನು ಬಿಟ್ಟು ಬೇರೆ ಪುರುಷನ ಸಂಗಡ ಓಡುವ ಸ್ತ್ರೀಯಂತೆ ಅವರಿದ್ದರು. ಅವರು ಇನ್ನೂ ಅನೇಕ ಅಸಹ್ಯಕರವಾದ ಕಾರ್ಯಗಳನ್ನು ಮಾಡಿದರು.