ದಾನಿಯೇಲ 9:3 - ಪರಿಶುದ್ದ ಬೈಬಲ್3 ಆಗ ನಾನು ದೇವರಾದ ನನ್ನ ಯೆಹೋವನನ್ನು ಪ್ರಾರ್ಥಿಸಿದೆ ಮತ್ತು ಆತನ ಸಹಾಯವನ್ನು ಕೋರಿದೆ. ನಾನು ಯಾವ ಆಹಾರವನ್ನೂ ಸ್ವೀಕರಿಸಲಿಲ್ಲ ಮತ್ತು ದುಃಖಸೂಚಕವಾದ ವಸ್ತ್ರಗಳನ್ನು ಧರಿಸಿಕೊಂಡೆ. ನನ್ನ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಾನು ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಕರ್ತನಾದ ದೇವರ ಕಡೆಗೆ ಮುಖವೆತ್ತಿ ಪ್ರಾರ್ಥನೆ, ವಿಜ್ಞಾಪನೆಗಳಲ್ಲಿ ನಿರತನಾದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಉಪವಾಸವಿದ್ದು, ಗೋಣಿತಟ್ಟು ಸುತ್ತಿಕೊಂಡು, ಬೂದಿ ಬಳಿದುಕೊಂಡು, ಸರ್ವೇಶ್ವರನಾದ ದೇವರ ಕಡೆಗೆ ಮುಖವೆತ್ತಿ, ಪ್ರಾರ್ಥನೆ-ವಿಜ್ಞಾಪನೆಗಳಲ್ಲಿ ನಿತರನಾದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಕರ್ತನಾದ ದೇವರ ಕಡೆಗೆ ಮುಖವೆತ್ತಿ ಪ್ರಾರ್ಥನೆ ವಿಜ್ಞಾಪನೆಗಳಲ್ಲಿ ನಿರತನಾದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆದ್ದರಿಂದ ನಾನು ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದುಕೊಂಡು, ಪ್ರಾರ್ಥನೆಗಳಿಂದ ಮತ್ತು ವಿಜ್ಞಾಪನೆಗಳಿಂದ ಕರ್ತರಾದ ದೇವರ ಕಡೆಗೆ ನನ್ನ ಮುಖವನ್ನು ತಿರುಗಿಸಿದೆನು. ಅಧ್ಯಾಯವನ್ನು ನೋಡಿ |
ದಾನಿಯೇಲನು ಯಾವಾಗಲೂ ಪ್ರತಿದಿನ ಮೂರು ಸಲ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದನು. ದಾನಿಯೇಲನು ಮೊಣಕಾಲೂರಿ ದೇವರಲ್ಲಿ ಪ್ರಾರ್ಥಿಸುತ್ತಿದ್ದನು ಮತ್ತು ದೇವರನ್ನು ಸ್ತುತಿಸುತ್ತಿದ್ದನು. ಈ ಹೊಸ ಶಾಸನದ ಬಗ್ಗೆ ಕೇಳಿದ ಮೇಲೆ ದಾನಿಯೇಲನು ತನ್ನ ಮನೆಯ ಮಹಡಿಯ ಮೇಲಿದ್ದ ತನ್ನ ಕೋಣೆಗೆ ಹೋಗಿ ಜೆರುಸಲೇಮಿನ ಕಡೆಗೆ ತೆರೆದ ಕಿಟಕಿಯ ಬಳಿ ಮೊಣಕಾಲೂರಿ ಎಂದಿನಂತೆ ಪ್ರಾರ್ಥನೆಮಾಡಿದನು.