ದಾನಿಯೇಲ 9:2 - ಪರಿಶುದ್ದ ಬೈಬಲ್2 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ ದಾನಿಯೇಲನೆಂಬ ನಾನು ಕೆಲವು ಧರ್ಮಗ್ರಂಥಗಳನ್ನು ಓದುತ್ತಿದ್ದೆ. ಎಪ್ಪತ್ತು ವರ್ಷಗಳ ತರುವಾಯ ಜೆರುಸಲೇಮಿನ ಪುನರ್ನಿರ್ಮಾಣವಾಗುವದೆಂದು ಯೆಹೋವನು ಯೆರೆಮೀಯನಿಗೆ ಹೇಳಿದ್ದು ನನಗೆ ಈ ಧರ್ಮಗ್ರಂಥಗಳಿಂದ ತಿಳಿಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಯೆರೂಸಲೇಮ್ ಹಾಳು ಬಿದ್ದಿರಬೇಕಾದ ಪೂರ್ಣಕಾಲದ ವರ್ಷಗಳ ಸಂಖ್ಯೆ ಎಪ್ಪತ್ತೆಂದು ತಿಳಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ, ಸರ್ವೇಶ್ವರಸ್ವಾಮಿ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಜೆರುಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ದಾನಿಯೇಲನಾದ ನಾನು ಶಾಸ್ತ್ರಗಳನ್ನು ಪರೀಕ್ಷಿಸಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಯೆರೂಸಲೇಮು ಹಾಳುಬಿದ್ದಿರಬೇಕಾದ ಪೂರ್ಣಕಾಲದ ವರುಷಗಳ ಸಂಖ್ಯೆ ಎಪ್ಪತ್ತೆಂದು ತಿಳಿದು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ದಾನಿಯೇಲನಾದ ನಾನು ಪವಿತ್ರ ಗ್ರಂಥಗಳನ್ನು ಪರೀಕ್ಷಿಸಿ, ಯೆಹೋವ ದೇವರ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ, ಯೆರೂಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣ ಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆನು. ಅಧ್ಯಾಯವನ್ನು ನೋಡಿ |
ನಾನು ಈ ದ್ರಾಕ್ಷಾರಸವನ್ನು ಜೆರುಸಲೇಮಿನ ಮತ್ತು ಯೆಹೂದದ ಜನರಿಗೆ ಸುರಿದೆನು. ನಾನು ರಾಜನನ್ನು ಮತ್ತು ಯೆಹೂದದ ನಾಯಕರನ್ನು ಈ ಪಾತ್ರೆಯಲ್ಲಿಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು. ಅವರು ಬರಿದಾದ ಮರುಭೂಮಿಯಂತಾಗಲೆಂದು ಹೀಗೆ ಮಾಡಿದೆನು. ಆ ಸ್ಥಳವು ತುಂಬಾ ಹಾಳಾಗಲಿ, ಜನರು ಅದರ ಬಗ್ಗೆ ಸಿಳ್ಳುಹಾಕಲಿ, ಶಾಪಹಾಕಲಿ ಎಂಬ ಉದ್ದೇಶದಿಂದ ನಾನು ಹಾಗೆ ಮಾಡಿದೆನು. ಹಾಗೆಯೇ ಆಯಿತು. ಯೆಹೂದವು ಈಗ ಹಾಗೆಯೇ ಇದೆ.
ಹೀಗೆ ಹೇಳಿದರು, “ಪ್ರವಾದಿಯಾದ ಮೀಕಾಯನು ಮೋರೆಷೆತ್ ನಗರದವನಾಗಿದ್ದನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಕಾಲದಲ್ಲಿ ಮೀಕಾಯನು ಪ್ರವಾದಿಯಾಗಿದ್ದನು. ಯೆಹೂದದ ಸಮಸ್ತ ಜನರಿಗೆ ಮೀಕಾಯನು ಹೀಗೆ ಹೇಳಿದನು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಚೀಯೋನ್ ನಗರವು ನೇಗಿಲುಹೊಡೆದ ಹೊಲವಾಗುವುದು. ಜೆರುಸಲೇಮ್ ನಗರವು ಕಲ್ಲಿನ ದಿಬ್ಬವಾಗುವುದು. ಪವಿತ್ರ ಆಲಯವಿದ್ದ ಪರ್ವತವು ಮರಗಿಡಗಳಿಂದ ಮುಚ್ಚಿಹೋಗುವುದು.’