Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 6:24 - ಪರಿಶುದ್ದ ಬೈಬಲ್‌

24 ಆಗ ರಾಜನು ದಾನಿಯೇಲನ ಮೇಲೆ ದೋಷಾರೋಪಣೆಯನ್ನು ಮಾಡಿದ ಜನರನ್ನು ಸಿಂಹಗಳ ಗುಹೆಗೆ ಕರೆತರಬೇಕೆಂದು ಆಜ್ಞಾಪಿಸಿದನು. ಆ ಜನರನ್ನೂ ಅವರ ಹೆಂಡತಿಮಕ್ಕಳನ್ನೂ ಸಹಿತವಾಗಿ ಸಿಂಹಗಳ ಗುಹೆಯಲ್ಲಿ ಎಸೆಯಲಾಯಿತು. ಅವರು ಗುಹೆಯ ನೆಲಕ್ಕೆ ಮುಟ್ಟುವ ಮೊದಲೇ ಸಿಂಹಗಳು ಅವರನ್ನು ಎಳೆದುಕೊಂಡವು. ಸಿಂಹಗಳು ಅವರ ದೇಹಗಳನ್ನು ತಿಂದು ಎಲುಬುಗಳನ್ನು ಅಗಿದುಹಾಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳವನ್ನು ಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ, ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ಮಡದಿಮಕ್ಕಳ ಸಮೇತ ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲುಬುಗಳನ್ನೆಲ್ಲ ಚೂರುಚೂರು ಮಾಡಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರುಹೊರಿಸಿದವರನ್ನು ತಂದು ಅವರನ್ನೂ ಅವರ ಹೆಂಡತಿಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು; ಅವರು ಗವಿಯ ಅಡಿಯನ್ನು ಮುಟ್ಟುವದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಗ ಅರಸನು ಆಜ್ಞಾಪಿಸಲಾಗಿ, ದಾನಿಯೇಲನ ಮೇಲೆ ತಪ್ಪು ಹೊರಿಸಿದ್ದ ಮನುಷ್ಯರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗುಹೆಯಲ್ಲಿ ಹಾಕಿದರು. ಅವರು ಗುಹೆಯ ತಳವನ್ನು ಮುಟ್ಟುವುದಕ್ಕೆ ಮೊದಲೇ ಸಿಂಹಗಳು ಅವರ ಮೇಲೆ ಹಾರಿ ಬಂದು, ಅವರ ಎಲುಬುಗಳನ್ನೆಲ್ಲಾ ತುಂಡುತುಂಡಾಗಿ ಮುರಿದುಹಾಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 6:24
13 ತಿಳಿವುಗಳ ಹೋಲಿಕೆ  

ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು. ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು. ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!


ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.


ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು. ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.


ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು.


ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿನ ನಿಯಮಗಳಿಗನುಸಾರವಾಗಿ ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೋವನು, “ಮಕ್ಕಳು ಮಾಡಿದ ತಪ್ಪಿಗೆ ತಂದೆತಾಯಿಗಳನ್ನು ಸಾವಿಗೆ ಗುರಿಪಡಿಸಬಾರದು. ತಂದೆತಾಯಿಗಳು ಮಾಡಿದ ತಪ್ಪಿಗೆ ಅವರ ಮಕ್ಕಳನ್ನು ಸಾವಿಗೆ ಗುರಿಪಡಿಸಬಾರದು. ಒಬ್ಬ ವ್ಯಕ್ತಿಯನ್ನು ಅವನು ಮಾಡಿದ ಕೆಟ್ಟಕಾರ್ಯಕ್ಕಾಗಿ ಮಾತ್ರ ಸಾವಿಗೆ ಗುರಿಪಡಿಸಬೇಕು” ಎಂದು ಆಜ್ಞಾಪಿಸಿದ್ದಾನೆ.


“ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.


ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. ಅವನ ಬದಲಾಗಿ ದುಷ್ಟನು ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವನು.


ಇವರು ಹಾಮಾನನ ಹತ್ತು ಗಂಡುಮಕ್ಕಳಾಗಿದ್ದರು. ಹಾಮಾನನು ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದನು. ಯೆಹೂದ್ಯರು ಅವರನ್ನು ಹತಿಸಿದ್ದು ಮಾತ್ರವೇ, ಹೊರತು ಅವರ ಸೊತ್ತುಗಳನ್ನು ಅಪಹರಿಸಲಿಲ್ಲ.


ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು.


ಸುಳ್ಳುಸಾಕ್ಷಿಯು ದಂಡಿಸಲ್ಪಡುವನು; ಸುಳ್ಳುಗಾರನು ನಾಶವಾಗುವನು.


“ಅದಕ್ಕಾಗಿ ಯೆಹೋವನು ಹೀಗೆನ್ನುತ್ತಾನೆ: ‘ನೀವು ನನ್ನ ಆಜ್ಞಾಪಾಲನೆಯನ್ನು ಮಾಡಿಲ್ಲ. ನೀವು ನಿಮ್ಮ ಸಹೋದರರಾದ ಇಬ್ರಿಯರಿಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ನೀವು ಒಡಂಬಡಿಕೆಗನುಸಾರವಾಗಿ ನಡೆದುಕೊಂಡಿಲ್ಲ. ಅದಕ್ಕಾಗಿ ನಾನು “ಸ್ವಾತಂತ್ರ್ಯವನ್ನು ಕೊಡುತ್ತೇನೆ.” ಇದು ಯೆಹೋವನ ನುಡಿ. ಖಡ್ಗ, ಭಯಂಕರವಾದ ವ್ಯಾಧಿ ಮತ್ತು ಹಸಿವು ಇವುಗಳಿಗೆ ನಿಮ್ಮನ್ನು ಕೊಲ್ಲುವ “ಸ್ವಾತಂತ್ರ್ಯವನ್ನು” ನಾನು ಕೊಡುತ್ತೇನೆ. ಈ ವಿಷಯ ಕೇಳಿ ಭೂಲೋಕದ ಸಮಸ್ತ ರಾಜ್ಯಗಳು ಭಯಪಡುವಂತೆ ಮಾಡುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು