15 ಆಗ ಅವರು ಗುಂಪಾಗಿ ಅರಸನ ಬಳಿಗೆ ಹೋಗಿ, “ಅರಸನೇ, ನೆನಪಿಡು, ಮೇದ್ಯಯರ ಮತ್ತು ಪಾರಸಿಯರ ಶಾಸನದ ಪ್ರಕಾರ ಅರಸನ ಹಸ್ತಾಕ್ಷರದೊಂದಿಗೆ ಹೊರಡಿಸಿದ ರಾಜಾಜ್ಞೆಯನ್ನು ಎಂದಿಗೂ ರದ್ದುಗೊಳಿಸಲಾಗುವುದಿಲ್ಲ; ಅದರಲ್ಲಿ ಬದಲಾವಣೆ ಮಾಡಲಾಗುವುದಿಲ್ಲ” ಎಂದರು.
15 ಇದನ್ನು ತಿಳಿದು ಆ ಜನರು ರಾಜನ ಬಳಿಗೆ ಕೂಡಿಬಂದು, “ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ” ಎಂದು ಹೇಳಿದರು. ಇದರಿಂದ ಅನಿವಾರ್ಯವಾಗಿ ರಾಜನು ಅಪ್ಪಣೆ ಕೊಡಲೇ ಬೇಕಾಯಿತು.
15 ಇದನ್ನು ಅರಿತುಕೊಂಡ ಆ ಅಧಿಕಾರಿಗಳು ರಾಜಸನ್ನಿಧಿಗೆ ಮತ್ತೆ ಕೂಡಿಬಂದು, “ಪ್ರಭೂ, ರಾಜರು ವಿಧಿಸಿದ ಯಾವ ನಿಬಂಧನೆಯಾಗಲಿ, ಶಾಸನವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರ ಮೇದ್ಯರಲ್ಲೂ ಪರ್ಷಿಯರಲ್ಲೂ ಉಂಟೆಂಬುದು ತಮಗೆ ತಿಳಿದಿರಬೇಕು,” ಎಂದರು.
15 ಇದನ್ನು ತಿಳಿದು ಆ ಜನರು ಸನ್ನಿಧಿಗೆ ಕೂಡಿಬಂದು - ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ ಪಾರಸಿಯರಲ್ಲಿಯೂ ಉಂಟೆಂಬದು ನಿನಗೆ ಗೊತ್ತಿರಲಿ ಎಂದು ಹೇಳಲು ರಾಜನ ಅಪ್ಪಣೆಯಾಯಿತು;
15 ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿಬಂದು ಅರಸನಿಗೆ, “ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ, ಆಜ್ಞೆಯಾದರೂ ರದ್ದಾಗಬಾರದು ಎಂಬ ಮೇದ್ಯ ಮತ್ತು ಪಾರಸಿಯರ ನಿಯಮದಲ್ಲಿದೆ ಎಂದು ನಿನಗೆ ತಿಳಿದಿರಬೇಕು,” ಎಂದರು.
ಅವರು ಅರಸನ ಬಳಿಗೆ ಹೋಗಿ ತಮ್ಮ ಶಾಸನದ ಬಗ್ಗೆ ಅರಸನೊಂದಿಗೆ ಮಾತನಾಡಿದರು. ಅವರು, “ರಾಜನಾದ ದಾರ್ಯಾವೆಷನೇ. ಮುಂಬರುವ ಮೂವತ್ತು ದಿನಗಳಲ್ಲಿ ಯಾರಾದರೂ ನಿನ್ನ ಹೊರತು ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಸಲ್ಲಿಸಿದರೆ ಅವರನ್ನು ಸಿಂಹದ ಗುಹೆಯಲ್ಲಿ ಎಸೆಯಲಾಗುವುದೆಂಬ ಶಾಸನಕ್ಕೆ ನೀನು ರುಜು ಹಾಕಿರುವಿಯಲ್ಲವೆ?” ಎಂದು ಕೇಳಿದರು. ರಾಜನು, “ಹೌದು, ನಾನು ಆ ಶಾಸನಕ್ಕೆ ರುಜು ಹಾಕಿದ್ದೇನೆ. ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ರದ್ದಾಗುವದಿಲ್ಲ ಮತ್ತು ಬದಲಾವಣೆ ಹೊಂದುವದಿಲ್ಲ” ಎಂದು ಉತ್ತರಕೊಟ್ಟನು.
ಈಗ ಇನ್ನೊಂದು ರಾಜಾಜ್ಞೆಯನ್ನು ಬರೆಯಿಸಲು ನಾನು ನಿಮಗೆ ಅಧಿಕಾರ ಕೊಡುತ್ತೇನೆ. ನಿಮಗೆ ಸರಿತೋಚುವ ರೀತಿಯಲ್ಲಿ ಯೆಹೂದ್ಯರಿಗೆ ಸಹಾಯವಾಗುವಂತೆ ಆ ಆಜ್ಞೆಯನ್ನು ರಾಜನ ಅಧಿಕಾರದೊಡನೆ ಬರೆಯಿಸಿ, ರಾಜನ ಉಂಗುರದಿಂದ ಮುದ್ರೆ ಒತ್ತಿರಿ. ರಾಜ ಮುದ್ರೆಯುಳ್ಳ ಯಾವ ಆಜ್ಞೆಯೂ ರದ್ದಾಗಕೂಡದು” ಎಂದನು.
ಅರಸನೇ, ಈ ನಿಬಂಧನೆಯನ್ನು ಬರೆದ ಕಾಗದಕ್ಕೆ ನಿನ್ನ ಹಸ್ತಾಕ್ಷರ ಹಾಕಿ ಅದನ್ನು ಶಾಸನವನ್ನಾಗಿ ಮಾಡು. ಹೀಗೆ ಮಾಡಿದರೆ ಶಾಸನವನ್ನು ಬದಲಾಯಿಸಲಾಗುವುದಿಲ್ಲ. ಏಕೆಂದರೆ ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ಎಂದಿಗೂ ರದ್ದಾಗುವದಿಲ್ಲ ಮತ್ತು ಅವುಗಳನ್ನು ಬದಲಾಯಿಸಲಾಗುವುದಿಲ್ಲ.”