ದಾನಿಯೇಲ 6:13 - ಪರಿಶುದ್ದ ಬೈಬಲ್13 ಆಗ ಅವರು ರಾಜನಿಗೆ, “ದಾನಿಯೇಲನೆಂಬ ಆ ಮನುಷ್ಯ ನಿನ್ನ ಕಡೆಗೆ ಎಳ್ಳಷ್ಟೂ ಗಮನ ಕೊಡುತ್ತಿಲ್ಲ. ಅವನು ಯೆಹೂದದ ಸೆರೆಯಾಳುಗಳಲ್ಲೊಬ್ಬನು. ನೀನು ರುಜುಹಾಕಿದ ಶಾಸನಕ್ಕೆ ಅವನು ಸ್ವಲ್ಪವಾದರೂ ಬೆಲೆಕೊಡುತ್ತಿಲ್ಲ. ದಾನಿಯೇಲನು ಈಗಲೂ ದಿನಕ್ಕೆ ಮೂರು ಸಲ ತನ್ನ ದೇವರಲ್ಲಿ ಪ್ರಾರ್ಥಿಸುತ್ತಾನೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆಗ ಅವರು ರಾಜನ ಸನ್ನಿಧಿಯಲ್ಲಿ, “ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ, ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ, ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಅವನ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ” ಎಂದು ಅರಿಕೆ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಆಗ ಅವರು ರಾಜಸನ್ನಿಧಿಯಲ್ಲಿ, “ರಾಜರೇ, ಜುದೇಯದಿಂದ ಸೆರೆಯಾಳುಗಳಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿಮ್ಮನ್ನಾಗಲಿ, ನಿಮ್ಮ ಹಸ್ತಾಕ್ಷರದ ರುಜುವಿರುವ ಶಾಸನವನ್ನಾಗಲಿ ಮಾನ್ಯಮಾಡುತ್ತಿಲ್ಲ.“ ಬದಲಿಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡುತ್ತಿದ್ದಾನೆ,” ಎಂದು ದೂರಿತ್ತರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಇದಕ್ಕವರು ಸನ್ನಿಧಿಯಲ್ಲಿ - ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಪ್ರಾರ್ಥಿಸಿಕೊಳ್ಳುತ್ತಾನೆ ಎಂದು ಅರಿಕೆಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆಗ ಅವರು ಉತ್ತರವಾಗಿ ಅರಸನ ಮುಂದೆ, “ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ, ನೀನು ರುಜು ಹಾಕಿದ ನಿರ್ಣಯವನ್ನೂ ಲಕ್ಷಿಸದೆ, ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ,” ಎಂದರು. ಅಧ್ಯಾಯವನ್ನು ನೋಡಿ |