ದಾನಿಯೇಲ 6:12 - ಪರಿಶುದ್ದ ಬೈಬಲ್12 ಅವರು ಅರಸನ ಬಳಿಗೆ ಹೋಗಿ ತಮ್ಮ ಶಾಸನದ ಬಗ್ಗೆ ಅರಸನೊಂದಿಗೆ ಮಾತನಾಡಿದರು. ಅವರು, “ರಾಜನಾದ ದಾರ್ಯಾವೆಷನೇ. ಮುಂಬರುವ ಮೂವತ್ತು ದಿನಗಳಲ್ಲಿ ಯಾರಾದರೂ ನಿನ್ನ ಹೊರತು ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಸಲ್ಲಿಸಿದರೆ ಅವರನ್ನು ಸಿಂಹದ ಗುಹೆಯಲ್ಲಿ ಎಸೆಯಲಾಗುವುದೆಂಬ ಶಾಸನಕ್ಕೆ ನೀನು ರುಜು ಹಾಕಿರುವಿಯಲ್ಲವೆ?” ಎಂದು ಕೇಳಿದರು. ರಾಜನು, “ಹೌದು, ನಾನು ಆ ಶಾಸನಕ್ಕೆ ರುಜು ಹಾಕಿದ್ದೇನೆ. ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ರದ್ದಾಗುವದಿಲ್ಲ ಮತ್ತು ಬದಲಾವಣೆ ಹೊಂದುವದಿಲ್ಲ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಅವರು ರಾಜನ ಬಳಿಗೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜನೇ, ಯಾರಾದರೂ ಮೂವತ್ತು ದಿನಗಳ ತನಕ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆವಿಜ್ಞಾಪನೆ ಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದ್ದೀಯಲ್ಲಾ” ಎಂದು ಕೇಳಲು, ರಾಜನು, “ಹೌದು, ಮೇದ್ಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರವಾದ ನಿಬಂಧನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಕೂಡಲೆ ಆಸ್ಥಾನಕ್ಕೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜರೇ, ಯಾರೂ ಮೂವತ್ತು ದಿನಗಳ ತನಕ ತಮಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಕೂಡದು. ಮಾಡಿದರೆ ಅಂಥವನನ್ನು ಸಿಂಹಗಳ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀವು ರುಜುಹಾಕಿದಿರಲ್ಲವೆ?” ಎಂದು ಕೇಳಿದರು. ಅದಕ್ಕೆ ರಾಜನು, “ಹೌದು, ಮೇದ್ಯರ ಹಾಗು ಪರ್ಷಿಯರ ಧರ್ಮವಿಧಿಗಳಂತೆ ಅದು ಸ್ಥಿರವಾದ ನಿಬಂಧನೆ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ - ರಾಜನೇ, ಯಾವನಾದರೂ ಮೂವತ್ತು ದಿನಗಳ ತನಕ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದಿಯಲ್ಲಾ ಎಂದು ಕೇಳಲು ರಾಜನು - ಹೌದು, ಮೇದ್ಯಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅನಂತರ ಅವರು ಅರಸನ ಮುಂದೆ ಬಂದು ರಾಜಾಜ್ಞೆಯ ವಿಷಯವಾಗಿ: “ಅರಸನೇ ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡುವರೋ, ಅವರನ್ನು ಸಿಂಹದ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀನು ರುಜು ಹಾಕಲಿಲ್ಲವೇ?” ಎಂದರು. ಅದಕ್ಕೆ ಅರಸನು ಉತ್ತರವಾಗಿ, “ಮೇದ್ಯ, ಪಾರಸಿಯರ ಬದಲಾಗದಂಥ ಧರ್ಮವಿಧಿಗಳ ಪ್ರಕಾರ ಅದು ಸ್ಥಿರವಾದ ನಿಬಂಧನೆ” ಎಂದನು. ಅಧ್ಯಾಯವನ್ನು ನೋಡಿ |
“ಆದ್ದರಿಂದ ರಾಜನು ಒಪ್ಪುವುದಾದರೆ ನನ್ನ ಸಲಹೆ ಏನೆಂದರೆ, ಅರಸನು ಒಂದು ರಾಜಾಜ್ಞೆಯನ್ನು ಹೊರಡಿಸಬೇಕು. ಆ ಆಜ್ಞೆಯು ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳಲ್ಲಿ ಬರೆಯಲ್ಪಡಬೇಕು. ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳು ಎಂದಿಗೂ ಬದಲಾಗುವದಿಲ್ಲ. ರಾಜಾಜ್ಞೆಯು ಏನೆಂದರೆ, ಅರಸನಾದ ಅಹಷ್ವೇರೋಷನ ಸನ್ನಿಧಿಗೆ ರಾಣಿಯು ಪ್ರವೇಶಿಸಲೇ ಕೂಡದು. ಮಾತ್ರವಲ್ಲ ರಾಜನು ವಷ್ಟಿ ರಾಣಿಯ ಸ್ಥಾನವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ.