ದಾನಿಯೇಲ 3:6 - ಪರಿಶುದ್ದ ಬೈಬಲ್6 ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವನು” ಎಂದು ಸಾರಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಯಾರು ಅಡ್ಡಬಿದ್ದು ಆರಾಧಿಸುವುದಿಲ್ಲವೋ ಅಂಥವರನ್ನು ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು,” ಎಂದು ಸಾರಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಯಾವನು ಅಡ್ಡಬಿದ್ದು ಪೂಜಿಸುವದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲ್ಪಡುವನು ಎಂದು ಸಾರಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಯಾರು ಅಡ್ಡಬೀಳದೆ, ನಮಸ್ಕರಿಸದೆ ಇರುವರೋ ಅಂಥವರನ್ನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯಲ್ಲಿ ಹಾಕಲಾಗುವುದು. ಇದು ರಾಜಾಜ್ಞೆ,” ಎಂದನು. ಅಧ್ಯಾಯವನ್ನು ನೋಡಿ |
ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.
ರಾಜ್ಯದ ಸಕಲ ಮುಖ್ಯಾಧಿಕಾರಿಗಳು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಸಂಸ್ಥಾನಾಧ್ಯಕ್ಷರು ಸೇರಿ ಒಂದು ಆಲೋಚನೆಯನ್ನು ಮಾಡಿದ್ದಾರೆ. ಈ ಸಂಬಂಧವಾಗಿ ಅರಸನು ಒಂದು ನಿಬಂಧನೆಯನ್ನು ಮಾಡಿ ರಾಜಾಜ್ಞೆಯನ್ನು ಹೊರಡಿಸಬೇಕೆಂದು ನಮ್ಮೆಲ್ಲರ ಅನಿಸಿಕೆ. ಎಲ್ಲರೂ ಆ ರಾಜಾಜ್ಞೆಯನ್ನು ಪಾಲಿಸಬೇಕು. ಆ ನಿಬಂಧನೆ ಹೀಗಿದೆ: ಬರಲಿರುವ ಮೂವತ್ತು ದಿನ ಯಾರೂ ಅರಸನಾದ ನಿನ್ನನ್ನು ಬಿಟ್ಟು ಬೇರೆ ಯಾವ ದೇವರನ್ನಾಗಲಿ ಮನುಷ್ಯನನ್ನಾಗಲಿ ಪ್ರಾರ್ಥಿಸಕೂಡದು. ಯಾರಾದರೂ ಹಾಗೆ ಮಾಡಿದರೆ ಅವರನ್ನು ಸಿಂಹಗಳ ಗುಹೆಯಲ್ಲಿ ಎಸೆಯಲಾಗುವುದು.
ಹಲವಾರು ಜನಾಂಗದ ಮತ್ತು ಭಾಷೆಯ ಜನರು ಅವನಿಗೆ ತುಂಬ ಹೆದರುತ್ತಿದ್ದರು. ಏಕೆಂದರೆ ಮಹೋನ್ನತನಾದ ದೇವರು ಅವನನ್ನು ಬಹುದೊಡ್ಡ ರಾಜನನ್ನಾಗಿ ಮಾಡಿದ್ದನು. ನೆಬೂಕದ್ನೆಚ್ಚರನು ಯಾರನ್ನಾದರೂ ಕೊಲ್ಲಬೇಕೆಂದು ಇಚ್ಛಿಸಿದರೆ ಅವನನ್ನು ಕೊಲ್ಲಿಸಿಬಿಡುತ್ತಿದ್ದನು; ತನಗೆ ಬೇಕಾದವರನ್ನು ಉಳಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಏರಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಇಳಿಸುತ್ತಿದ್ದನು.