Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 3:24 - ಪರಿಶುದ್ದ ಬೈಬಲ್‌

24 ಅರಸನಾದ ನೆಬೂಕದ್ನೆಚ್ಚರನು ಬೆಚ್ಚಿ ತಟ್ಟನೆ ಎದ್ದುನಿಂತನು. ಅವನು ಆಶ್ಚರ್ಯಚಕಿತನಾಗಿ ತನ್ನ ಮಂತ್ರಿಗಳನ್ನು, “ನಾವು ಕೇವಲ ಮೂರು ಜನರನ್ನು ಕಟ್ಟಿದೆವು, ಕೇವಲ ಮೂರು ಜನರನ್ನು ಬೆಂಕಿಯಲ್ಲಿ ಎಸೆದೆವು. ಹೌದಲ್ಲವೇ?” ಎಂದು ಕೇಳಿದನು. ಅವನ ಮಂತ್ರಿಗಳು, “ಹೌದು, ಮಹಾರಾಜನೇ” ಎಂದು ಉತ್ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು ತಟ್ಟನೆದ್ದು ತನ್ನ ಮಂತ್ರಿಗಳನ್ನು - ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ ಎಂದು ಕೇಳಲು ಅವರು ರಾಜನಿಗೆ - ಅರಸೇ, ಹೌದು, ಸತ್ಯ ಎಂದುತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಗ ಅರಸನಾದ ನೆಬೂಕದ್ನೆಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು, ತನ್ನ ಆಲೋಚನಾಗಾರರ ಸಂಗಡ ಮಾತನಾಡಿ, “ನಾವು ಮೂವರು ಮನುಷ್ಯರನ್ನು ಕಟ್ಟಿ, ಬೆಂಕಿಯಲ್ಲಿ ಹಾಕಿದೆವಲ್ಲವೇ?” ಎಂದನು. ಆಗ ಅವರು ಅರಸನಿಗೆ, “ಅರಸನೇ, ಹೌದು ಸತ್ಯ,” ಎಂದು ಉತ್ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 3:24
18 ತಿಳಿವುಗಳ ಹೋಲಿಕೆ  

ನನ್ನ ದೇವರು ನನ್ನನ್ನು ರಕ್ಷಿಸುವುದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು. ಆ ದೇವದೂತನು ಸಿಂಹಗಳ ಬಾಯಿಯನ್ನು ಮುಚ್ಚಿದನು. ಸಿಂಹಗಳು ನನ್ನನ್ನು ಗಾಯಗೊಳಿಸಲಿಲ್ಲ. ಏಕೆಂದರೆ ನಾನು ತಪ್ಪಿತಸ್ಥನಲ್ಲವೆಂದು ನನ್ನ ದೇವರಿಗೆ ಗೊತ್ತುಂಟು. ರಾಜನೇ, ನಾನೆಂದೂ ನಿನಗೆ ತಪ್ಪು ಮಾಡಲಿಲ್ಲ” ಎಂದು ಉತ್ತರಿಸಿದನು.


ರಾಜ್ಯದ ಸಕಲ ಮುಖ್ಯಾಧಿಕಾರಿಗಳು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಸಂಸ್ಥಾನಾಧ್ಯಕ್ಷರು ಸೇರಿ ಒಂದು ಆಲೋಚನೆಯನ್ನು ಮಾಡಿದ್ದಾರೆ. ಈ ಸಂಬಂಧವಾಗಿ ಅರಸನು ಒಂದು ನಿಬಂಧನೆಯನ್ನು ಮಾಡಿ ರಾಜಾಜ್ಞೆಯನ್ನು ಹೊರಡಿಸಬೇಕೆಂದು ನಮ್ಮೆಲ್ಲರ ಅನಿಸಿಕೆ. ಎಲ್ಲರೂ ಆ ರಾಜಾಜ್ಞೆಯನ್ನು ಪಾಲಿಸಬೇಕು. ಆ ನಿಬಂಧನೆ ಹೀಗಿದೆ: ಬರಲಿರುವ ಮೂವತ್ತು ದಿನ ಯಾರೂ ಅರಸನಾದ ನಿನ್ನನ್ನು ಬಿಟ್ಟು ಬೇರೆ ಯಾವ ದೇವರನ್ನಾಗಲಿ ಮನುಷ್ಯನನ್ನಾಗಲಿ ಪ್ರಾರ್ಥಿಸಕೂಡದು. ಯಾರಾದರೂ ಹಾಗೆ ಮಾಡಿದರೆ ಅವರನ್ನು ಸಿಂಹಗಳ ಗುಹೆಯಲ್ಲಿ ಎಸೆಯಲಾಗುವುದು.


ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.


ನಾನು ದಮಸ್ಕದ ದಾರಿಯಲ್ಲಿ ಹೋಗುತ್ತಿದ್ದೆನು. ಆಗ ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಆಗ ಆಕಾಶದಿಂದ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಬೆಳಕೊಂದು ಬಂದು ನನ್ನ ಸುತ್ತಲೂ ಮತ್ತು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಪ್ರಜ್ವಲಿಸಿತು.


ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು.


ಈಗ ಎದ್ದು ಪಟ್ಟಣದೊಳಗೆ ಹೋಗು. ನೀನು ಏನು ಮಾಡಬೇಕೆಂಬುದನ್ನು ಅಲ್ಲಿಯ ಒಬ್ಬನು ನಿನಗೆ ತಿಳಿಸುವನು” ಎಂದಿತು.


“ರಾಜನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನನ್ನು ಮಹಾ ದೊಡ್ಡ ರಾಜನನ್ನಾಗಿಯೂ ಬಲಿಷ್ಠನಾದ ರಾಜನನ್ನಾಗಿಯೂ ಪ್ರಮುಖನಾದ ರಾಜನನ್ನಾಗಿಯೂ ಮಾಡಿದ್ದನು.


ರಾಜನಾದ ಬೇಲ್ಶಚ್ಚರನು ಬಹಳ ಹೆದರಿದನು. ಭಯದಿಂದ ಅವನ ಮುಖವು ಕಳೆಗುಂದಿತು; ಮತ್ತು ಅವನ ಮೊಣಕಾಲುಗಳು ನಡುಗಿ ಒಂದಕ್ಕೊಂದು ಬಡಿಯುತ್ತಿದ್ದವು. ಅವನ ಕಾಲುಗಳು ತುಂಬ ಬಲಹೀನವಾಗಿ ಅವನಿಗೆ ನಿಲ್ಲಲಾಗಲಿಲ್ಲ.


ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.


ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.


ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು.


ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು. ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.


ಯೆಹೋವನ ದೃಷ್ಟಿಯಲ್ಲಿ ಅಹಜ್ಯನು ದುಷ್ಕೃತ್ಯಗಳನ್ನು ಮಾಡಿದನು. ಅಹಜ್ಯನ ತಂದೆಯು ಸತ್ತುಹೋದ ಬಳಿಕ ಅಹಾಬನ ಕುಟುಂಬದವರು ಅಹಜ್ಯನಿಗೆ ಕೆಟ್ಟ ಸಲಹೆಗಳನ್ನು ಕೊಟ್ಟರು. ಆ ಕೆಟ್ಟ ಸಲಹೆಗಳು ಅವನನ್ನು ಮರಣಕ್ಕೆ ನಡೆಸಿದವು.


ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯಲ್ಲಿ ಬಿದ್ದುಬಿಟ್ಟರು.


ಆಗ ಅರಸನು, “ನೋಡಿರಿ, ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ನನಗೆ ಕಾಣುತ್ತಿದೆ. ಅವರು ಕಟ್ಟಲ್ಪಟ್ಟಿಲ್ಲ. ಅವರನ್ನು ಬೆಂಕಿಯು ಸುಟ್ಟಿಲ್ಲ. ನಾಲ್ಕನೆಯವನು ದೇವಕುಮಾರನಂತೆ ಕಾಣುತ್ತಾನೆ” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು