ದಾನಿಯೇಲ 3:22 - ಪರಿಶುದ್ದ ಬೈಬಲ್22 ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ರಾಜಾಜ್ಞೆಯು ಖಡಾಖಂಡಿತವಾಗಿದ್ದರಿಂದಲೂ ಆವಿಗೆಯ ಕಾವು ಅತಿ ತೀಕ್ಷ್ಣವಾಗಿದ್ದರಿಂದಲೂ ಅಗ್ನಿಕುಂಡವು ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವರನ್ನು ಎತ್ತಿ ತಂದವರನ್ನೇ ಭಸ್ಮಮಾಡಿಬಿಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಹೀಗಾಗಲು ರಾಜಾಜ್ಞೆಯು ಖಂಡಿತವಾಗಿದದ್ದರಿಂದಲೂ ಆವಿಗೆಯ ಕಾವು ಅತಿತೀಕ್ಷ್ಣವಾಗಿದ್ದದರಿಂದಲೂ ಅಗ್ನಿಜ್ವಾಲೆಯು ಶದ್ರಕ್ ಮೇಶಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದವರನ್ನೇ ಸಂಹರಿಸಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಅರಸನ ಆಜ್ಞೆಯು ಅವಸರವಾಗಿಯೂ, ಕುಲುಮೆಯು ಬಹು ಉರಿಯಾಗಿಯೂ ಇದ್ದುದರಿಂದ, ಬೆಂಕಿಯ ಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬವರನ್ನು ಬೆಂಕಿಗೆ ಹಾಕಲು ಎತ್ತಿದ ಆ ಸೈನಿಕರನ್ನೇ ಸಂಹರಿಸಿತು. ಅಧ್ಯಾಯವನ್ನು ನೋಡಿ |