ದಾನಿಯೇಲ 2:14 - ಪರಿಶುದ್ದ ಬೈಬಲ್14 ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬಿಲೋನಿನ ವಿದ್ವಾಂಸರ ಸಂಹಾರಕ್ಕಾಗಿ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಬಾಬಿಲೋನಿನ ಜ್ಞಾನಿಗಳನ್ನು ಕೊಲ್ಲಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಜ್ಞಾನದಿಂದಲೂ ಚಾತುರ್ಯದಿಂದಲೂ ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿ |
ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನೆಂಬವನು ಜೆರುಸಲೇಮಿನಲ್ಲಿ ಉಳಿದ ಜನರನ್ನು ಹಿಡಿದು ಬಂಧಿಗಳನ್ನಾಗಿ ಮಾಡಿದ್ದನು. ಅವರನ್ನು ಅವನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನ್ನೂ ಸಹ ನೆಬೂಜರದಾನನು ಬಂಧಿಗಳನ್ನಾಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನ್ನು ಬಂಧಿಗಳನ್ನಾಗಿ ಮಾಡಿ ಬಾಬಿಲೋನಿಗೆ ತೆಗೆದುಕೊಂಡು ಹೋದನು.