Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 11:41 - ಪರಿಶುದ್ದ ಬೈಬಲ್‌

41 ಉತ್ತರದ ರಾಜನು ಸುಂದರವಾದ ನಾಡಿನ ಮೇಲೆ ಧಾಳಿ ಮಾಡುವನು. ಉತ್ತರದ ರಾಜನು ಹಲವಾರು ದೇಶಗಳನ್ನು ಗೆದ್ದುಕೊಳ್ಳುವನು. ಆದರೆ ಎದೋಮ್ಯರು, ಮೋವಾಬ್ಯರು ಮತ್ತು ಅಮ್ಮೋನಿನ ನಾಯಕರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಅಂದ ಚಂದದ ದೇಶಕ್ಕೂ ನುಗ್ಗುವನು. ಅನೇಕ ಸೀಮೆಗಳು ಅವನಿಂದ ಹಾಳಾಗುವವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಅವನ ಕೈಯಿಂದ ತಪ್ಪಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಆ ‘ಚೆಲುವಿನ ನಾಡಿಗೂ’ ನುಗ್ಗುವನು. ಅನೇಕ ಸೀಮೆಗಳು ಅವನಿಂದ ನಾಶವಾಗುವುವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಅಂದಚಂದದ ದೇಶಕ್ಕೂ ನುಗ್ಗುವನು; ಅನೇಕ ಸೀಮೆಗಳು ಅವನಿಂದ ಹಾಳಾಗುವವು; ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಇವರುಗಳು ಅವನ ಕೈಯಿಂದ ತಪ್ಪಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳನ್ನು ನಾಶಮಾಡುವನು; ಆದರೆ ಎದೋಮು, ಮೋವಾಬು ಮತ್ತು ಅಮ್ಮೋನಿಯರಲ್ಲಿ ಮುಖ್ಯಸ್ಥರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 11:41
9 ತಿಳಿವುಗಳ ಹೋಲಿಕೆ  

“ಮೋವಾಬಿನ ಜನರನ್ನು ಸೆರೆಹಿಡಿದುಕೊಂಡು ಹೋಗಲಾಗುವುದು. ಆದರೆ ಭವಿಷ್ಯದಲ್ಲಿ ನಾನು ಮೋವಾಬ್ಯರನ್ನು ಪುನಃ ಕರೆದು ತರುವೆನು” ಇದು ಯೆಹೋವನಿಂದ ಬಂದ ಸಂದೇಶ. ಮೋವಾಬಿನ ಕುರಿತಾದ ನ್ಯಾಯತೀರ್ಪು ಇದೇ.


“ಅಮ್ಮೋನ್ಯರನ್ನು ಸೆರೆಯಾಳುಗಳನ್ನಾಗಿ ಕೊಂಡೊಯ್ಯಲಾಗುವುದು. ಆದರೆ ಅಮ್ಮೋನ್ಯರನ್ನು ನಾನು ಪುನಃ ಹಿಂದಕ್ಕೆ ಕರೆತರುವ ಕಾಲ ಬರುವದು.” ಇದು ಯೆಹೋವನ ನುಡಿ.


ಸಮುದ್ರಕ್ಕೂ ಸುಂದರವಾದ ಪರಿಶುದ್ಧ ಪರ್ವತಕ್ಕೂ ನಡುವೆ, ಅರಮನೆಯಂತಹ ತನ್ನ ಗುಡಾರಗಳನ್ನು ಹಾಕಿಸುವನು. ಕೊನೆಗೆ ಆ ಕೆಟ್ಟ ಅರಸನು ಸತ್ತುಹೋಗುವನು. ಅವನ ಅಂತ್ಯಕಾಲದ ಹೊತ್ತಿಗೆ ಅವನಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.


“ಉತ್ತರದ ರಾಜನು ತನ್ನ ಇಷ್ಟಬಂದಂತೆ ಮಾಡುವನು. ಯಾರಿಂದಲೂ ಅವನನ್ನು ತಡೆಯಲು ಸಾಧ್ಯವಾಗುವದಿಲ್ಲ. ಅವನು ಸುಂದರವಾದ ನಾಡಿನ ಮೇಲೆ ಅಧಿಕಾರವನ್ನೂ ನಿಯಂತ್ರಣವನ್ನೂ ಸಂಪಾದಿಸುವನು. ಅದನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುವನು.


ಆಗ ಅವುಗಳಿಂದ ಒಂದು ಚಿಕ್ಕ ಕೊಂಬು ಮೊಳೆಯಿತು. ಆ ಚಿಕ್ಕ ಕೊಂಬು ಬೆಳೆದು ಬಹಳ ದೊಡ್ಡದಾಯಿತು. ಅದು ಆಗ್ನೇಯಕ್ಕೆ ಬೆಳೆಯಿತು. ಅದು ದಕ್ಷಿಣಕ್ಕೆ, ಪೂರ್ವಕ್ಕೆ ಮತ್ತು ಸುಂದರವಾದ ನಾಡಿಗೆ ಬೆಳೆಯಿತು.


ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.


ಉತ್ತರದ ರಾಜನು ಹಲವಾರು ದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸುವನು. ಅವನು ಎಂಥ ಶಕ್ತಿಶಾಲಿ ಎಂಬುದು ಈಜಿಪ್ಟಿಗೂ ಗೊತ್ತಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು