23 ಅನೇಕ ರಾಷ್ಟ್ರಗಳು ಕ್ರೂರಿಯಾದ ಮತ್ತು ವಂಚಕನಾದ ಆ ಅರಸನೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವವು. ಆದರೆ ಅವನು ಸುಳ್ಳು ಹೇಳಿ ಅವರನ್ನು ವಂಚಿಸುವನು. ಅವನು ಹೆಚ್ಚಿನ ಅಧಿಕಾರವನ್ನು ಸಂಪಾದಿಸಿದರೂ ಕೆಲವೇ ಜನರು ಅವನಿಗೆ ಬೆಂಬಲ ನೀಡುವರು.
“ಅರಸನು ಚತುರನೂ ಕುತಂತ್ರಿಯೂ ಆಗಿರುವನು. ಅವನು ತನ್ನ ಬುದ್ಧಿಶಕ್ತಿಯನ್ನೂ ಹುಸಿನುಡಿಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದುವನು. ತಾನು ಬಹಳ ಮುಖ್ಯನೆಂದು ಅವನು ಭಾವಿಸುವನು. ನೆಮ್ಮದಿಯಾಗಿರುವ ಅನೇಕ ಜನರನ್ನು ಅನಿರೀಕ್ಷಿತವಾಗಿ ನಾಶಮಾಡುವನು. ಅವನು ರಾಜರುಗಳ ರಾಜನೊಂದಿಗೆ (ದೇವರೊಂದಿಗೆ) ಸಹ ಹೋರಾಡುವ ಪ್ರಯತ್ನ ಮಾಡುವನು. ಆದರೆ ಆ ಕ್ರೂರ ರಾಜನ ಶಕ್ತಿಯು ನಾಶವಾಗುವುದು. ಆದರೆ ಅದು ಮನುಷ್ಯನ ಕೈಯಿಂದ ನಾಶವಾಗುವದಿಲ್ಲ.
ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ;
ಯಾಕೋಬನ ಗಂಡುಮಕ್ಕಳು ಶೆಕೆಮನಿಗೂ ಅವನ ತಂದೆಗೂ ಸುಳ್ಳು ಹೇಳಲು ನಿರ್ಧರಿಸಿದರು. ತಮ್ಮ ತಂಗಿಯಾದ ದೀನಳಿಗೆ ಶೆಕೆಮನು ಅಂಥ ಕೆಟ್ಟಕಾರ್ಯವನ್ನು ಮಾಡಿದ್ದರಿಂದ ಅವರು ಇನ್ನೂ ಆವೇಶದಿಂದ ಇದ್ದರು.
“ಶ್ರೀಮಂತ ದೇಶಗಳು ನೆಮ್ಮದಿಯಿಂದಿರುವಾಗ ಈ ಕ್ರೂರಿಯು ಪೂರ್ವ ಸೂಚನೆಯಿಲ್ಲದೆ ಅವುಗಳ ಮೇಲೆ ದಾಳಿ ಮಾಡುವನು. ಅವನು ಸರಿಯಾದ ಸಮಯಕ್ಕೆ ದಾಳಿಮಾಡುವನು; ಅವನ ಪೂರ್ವಿಕರು ವಿಫಲರಾದ ದೇಶಗಳಲ್ಲಿ ಜಯ ಸಂಪಾದಿಸುವನು. ಅವನು ಸೋಲಿಸಿದ ದೇಶಗಳನ್ನು ಕೊಳ್ಳೆಹೊಡೆದು ದೊರೆತ ಸಂಪತ್ತನ್ನು ತನ್ನ ಅನುಯಾಯಿಗಳಲ್ಲಿ ಹಂಚುವನು. ಅವನು ಭದ್ರವಾದ ನಗರಗಳನ್ನು ಹಿಡಿದುಕೊಳ್ಳಲು ಮತ್ತು ನಾಶಮಾಡಲು ಯೋಜನೆಗಳನ್ನು ಮಾಡುವನು. ಅವನಿಗೆ ಜಯಸಿಕ್ಕಿದರೂ ಅದು ಸ್ವಲ್ಪ ಕಾಲದವರೆಗೆ ಮಾತ್ರ ಇರುತ್ತದೆ.
ಈ ಅರಸನು ಬಹಳ ಪ್ರಬಲನಾಗಿರುವನು. ಆದರೆ ಆ ಪ್ರಾಬಲ್ಯ ಸ್ವಶಕ್ತಿಯಿಂದ ಬಂದುದಲ್ಲ. ಈ ಅರಸನು ಅಪಾರ ವಿನಾಶವನ್ನುಂಟು ಮಾಡುವನು. ಅವನು ಕೈಕೊಂಡ ಪ್ರತಿಯೊಂದು ಕೆಲಸದಲ್ಲಿ ಅವನಿಗೆ ಜಯ ಲಭಿಸುವುದು. ಅವನು ಬಲಿಷ್ಠರನ್ನೂ ದೇವಭಕ್ತರನ್ನೂ ನಾಶಮಾಡುವನು.