Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 11:15 - ಪರಿಶುದ್ದ ಬೈಬಲ್‌

15 ಆಮೇಲೆ ಉತ್ತರದ ರಾಜನು ಬಂದು ಗೋಡೆಗಳಿಗೆ ದಿಬ್ಬಹಾಕಿ ಒಂದು ಭದ್ರವಾದ ನಗರವನ್ನು ವಶಪಡಿಸಿಕೊಳ್ಳುವನು. ದಕ್ಷಿಣದವರಲ್ಲಿ ಹೋರಾಡುವ ಶಕ್ತಿ ಇರುವದಿಲ್ಲ. ದಕ್ಷಿಣ ಸೈನ್ಯದ ಉತ್ತಮ ಸೈನಿಕರೂ ಕೂಡ ಉತ್ತರದ ಸೈನ್ಯವನ್ನು ತಡೆದು ನಿಲ್ಲಿಸಲು ಸಮರ್ಥರಾಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಉತ್ತರ ದಿಕ್ಕಿನ ರಾಜನು ಬಂದು ದಿಬ್ಬ ಹಾಕಿ, ಕೋಟೆ ಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಉತ್ತರರಾಜನು ಬಂದು, ಮುತ್ತಿಗೆಹಾಕಿ, ಕೋಟೆಕೊತ್ತಲದ ನಗರವನ್ನು ಹಿಡಿಯುವನು. ದಕ್ಷಿಣದ ಭುಜಬಲವು ಅವನನ್ನು ನಿಲ್ಲಿಸಲಾರದು. ಅಲ್ಲಿನ ಮಹಾವೀರರು ತಡೆಯಲಾರರು. ಎದುರಿಸುವ ಯಾವ ಶಕ್ತಿಯೂ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಉತ್ತರರಾಜನು ಬಂದು ದಿಬ್ಬಹಾಕಿ ಕೋಟೆಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆಗ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ, ದಿಬ್ಬವನ್ನು ಕೆಡವಿ, ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವನು. ದಕ್ಷಿಣದ ಭುಜಬಲವಾದರೂ ಅವನು ಆಯ್ದುಕೊಂಡ ಜನರಾದರೂ ಎದುರಿಸಿ ನಿಲ್ಲುವುದಕ್ಕೆ ಅಶಕ್ತರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 11:15
11 ತಿಳಿವುಗಳ ಹೋಲಿಕೆ  

ಈಜಿಪ್ಟಿನ ರಾಜನು ಯೆಹೂದದ ರಾಜನನ್ನು ರಕ್ಷಿಸಲು ಸಾಧ್ಯವಿಲ್ಲ. ಅವನು ಬಹಳ ಸೈನಿಕರನ್ನು ಕಳುಹಿಸಬಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನ್ನು ರಕ್ಷಿಸಲಾರದು. ನೆಬೂಕದ್ನೆಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನ್ನೂ ತಡೆಗಟ್ಟುಗಳನ್ನೂ ಕಟ್ಟಿ ಪಟ್ಟಣವನ್ನು ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು.


ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು: “ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ; ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ. ನಗರವನ್ನು ದಂಡಿಸಬೇಕು. ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.


ಆಮೇಲೆ, ನೀನೇ ಒಂದು ಸೈನ್ಯದೊಂದಿಗೆ ಆ ನಗರವನ್ನು ಮುತ್ತಿಗೆ ಹಾಕಿದವನಂತೆ ನಟನೆ ಮಾಡು. ನಗರದ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿ ನೀನು ಅದಕ್ಕೆ ಧಾಳಿ ಮಾಡಲು ಸಹಾಯವಾಗುವಂತೆ ಮಾಡು. ನಗರದ ಪೌಳಿಗೋಡೆಯ ತನಕ ಒಂದು ರಸ್ತೆಯನ್ನು ತಯಾರಿಸು. ಒಂದು ಭಿತ್ತಿಭೇದಕ ಯಂತ್ರವನ್ನು ತಂದು ಸೈನ್ಯದ ಪಾಳೆಯಗಳನ್ನು ನಗರದ ಸುತ್ತಲೂ ನಿರ್ಮಿಸು.


“ಕೆಲವು ವರ್ಷಗಳಾದ ಮೇಲೆ ದಕ್ಷಿಣ ದಿಕ್ಕಿನ ರಾಜನು ಮತ್ತು ಆ ಸೇನಾಧಿಪತಿಯು ಒಂದು ಒಪ್ಪಂದವನ್ನು ಮಾಡಿಕೊಳ್ಳುವರು. ದಕ್ಷಿಣದ ರಾಜನ ಮಗಳು ಉತ್ತರದ ರಾಜನನ್ನು ಮದುವೆಯಾಗುವಳು. ಶಾಂತಿಯನ್ನು ಸ್ಥಾಪಿಸುವದಕ್ಕಾಗಿ ಅವಳು ಹೀಗೆ ಮಾಡುವಳು. ಆದರೆ ಅವಳು ಮತ್ತು ದಕ್ಷಿಣದ ರಾಜನು ಸಾಕಷ್ಟು ಶಕ್ತಿಶಾಲಿಗಳಾಗಿರುವುದಿಲ್ಲ. ಜನರು ಅವಳನ್ನೂ ಮತ್ತು ಆ ದೇಶಕ್ಕೆ ಅವಳನ್ನು ಕರೆದುಕೊಂಡು ಹೋದ ವ್ಯಕ್ತಿಯನ್ನೂ ವಿರೋಧ ಮಾಡುವರು. ಆ ಜನರು ಅವಳ ಮಗು ಮತ್ತು ಅವಳ ಸಹಾಯಕನನ್ನು ವಿರೋಧಿಸುವರು.


ಹೋತವು ಟಗರಿನ ಕಡೆಗೆ ಓಡುವದನ್ನು ನಾನು ನೋಡುತ್ತಿದ್ದೆ. ಅದು ಅತಿ ಕೋಪದಿಂದ ಟಗರಿನ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಟಗರಿಗೆ ಆ ಹೋತವನ್ನು ತಡೆದು ನಿಲ್ಲಿಸಲಾಗಲಿಲ್ಲ. ಆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು. ಟಗರನ್ನು ಹೋತದಿಂದ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.


ಆದ್ದರಿಂದ ಚಿದ್ಕೀಯನು ತನ್ನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ದಂಡಯಾತ್ರೆ ಕೈಗೊಂಡನು. ನೆಬೂಕದ್ನೆಚ್ಚರನ ಸಂಗಡ ಅವನ ಇಡೀ ಸೈನ್ಯವಿತ್ತು. ಬಾಬಿಲೋನ್ ಸೈನ್ಯವು ಜೆರುಸಲೇಮಿನ ಹೊರಭಾಗದಲ್ಲಿ ಬೀಡುಬಿಟ್ಟಿತು. ಆ ನಗರವನ್ನು ಹತ್ತಲು ಅನುಕೂಲವಾಗುವಂತೆ ಅವರು ನಗರದ ಪೌಳಿಗೋಡೆಗೆ ಅಲ್ಲಲ್ಲಿ ಇಳಿಜಾರಾದ ಗೋಡೆಗಳನ್ನು ಕಟ್ಟಿದ್ದರು.


ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.


“ಯೆಹೂದದ ದ್ರಾಕ್ಷಿಯ ಸಾಲುಬಳ್ಳಿಗಳ ಬಳಿಗೆ ಹೋಗಿರಿ, ಆ ಬಳ್ಳಿಗಳನ್ನು ಕತ್ತರಿಸಿರಿ. ಆದರೆ ಅವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಡಿರಿ. ಅವುಗಳ ಎಲ್ಲಾ ಕೊಂಬೆಗಳನ್ನು ಕತ್ತರಿಸಿಬಿಡಿ. ಏಕೆಂದರೆ, ಈ ಕೊಂಬೆಗಳು ಯೆಹೋವನಿಗೆ ಸಂಬಂಧಿಸಿಲ್ಲ.


ನಾನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನ ಜೀವಮಾನದಲ್ಲೆಲ್ಲಾ ಯಾವನೂ ನಿನ್ನನ್ನು ತಡೆಯಲಾರನು. ನಾನು ನಿನ್ನನ್ನು ಕೈಬಿಡುವುದಿಲ್ಲ; ತೊರೆದುಬಿಡುವುದಿಲ್ಲ” ಎಂದು ಹೇಳಿದನು.


“ಆ ಕಾಲದಲ್ಲಿ ಹಲವಾರು ಜನರು ದಕ್ಷಿಣ ರಾಜನ ವಿರುದ್ಧವಾಗಿರುವರು. ಹೋರಾಡಲು ಇಚ್ಛಿಸುವ ನಿಮ್ಮ ಸ್ವಂತ ಜನರಲ್ಲಿ ಕೆಲವರು ದಕ್ಷಿಣ ರಾಜನ ವಿರುದ್ಧ ದಂಗೆ ಏಳುವರು. ಅವರು ಗೆಲ್ಲುವದಿಲ್ಲ. ಅವರು ಹೀಗೆ ಮಾಡಿ ದರ್ಶನ ನಿಜವಾಗುವಂತೆ ಮಾಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು