Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 1:7 - ಪರಿಶುದ್ದ ಬೈಬಲ್‌

7 ಅಶ್ಪೆನಜನು ಆ ಯೆಹೂದ್ಯ ತರುಣರಿಗೆ ಬಾಬಿಲೋನಿನ ಹೆಸರುಗಳನ್ನಿಟ್ಟನು. ದಾನಿಯೇಲನ ಹೊಸ ಹೆಸರು ಬೇಲ್ತೆಶಚ್ಚರ್, ಹನನ್ಯನ ಹೊಸ ಹೆಸರು ಶದ್ರಕ್, ಮೀಶಾಯೇಲನ ಹೊಸ ಹೆಸರು ಮೇಶಕ್ ಮತ್ತು ಅಜರ್ಯನ ಹೊಸ ಹೆಸರು ಅಬೇದ್‌ನೆಗೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮೀಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್ನೆಗೋ ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಕಂಚುಕಿಯರ ನಾಯಕನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ‘ಬೇಲ್ತೆಶಚ್ಚರ್’, ಹನನ್ಯನಿಗೆ ‘ಶದ್ರಕ್’, ಮಿಶಾಯೇಲನಿಗೆ ‘ಮೇಶಕ್’, ಹಾಗೂ ಅಜರ್ಯನಿಗೆ ‘ಅಬೇದ್‍ನೆಗೋ’, ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮೀಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್‍ನೆಗೋ ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಇವರಿಗೆ ಕಂಚುಕಿಯರ ಯಜಮಾನನು ದಾನಿಯೇಲನಿಗೆ ಬೇಲ್ತೆಶಚ್ಚರ್ ಎಂದೂ, ಹನನ್ಯನಿಗೆ ಶದ್ರಕ್ ಎಂದೂ, ಮೀಶಾಯೇಲನಿಗೆ ಮೇಶಕ್ ಎಂದೂ, ಅಜರ್ಯನಿಗೆ ಅಬೇದ್‌ನೆಗೋ ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 1:7
13 ತಿಳಿವುಗಳ ಹೋಲಿಕೆ  

ನಾನು ಹೇಳುತ್ತಿರುವ ಮನುಷ್ಯನ ಹೆಸರು ದಾನಿಯೇಲ. ರಾಜನು ಅವನಿಗೆ ಬೇಲ್ತೆಶಚ್ಚರನೆಂದು ಹೆಸರಿಟ್ಟಿದ್ದನು. ಬೇಲ್ತೆಶಚ್ಚರನು ಬಹಳ ಚಾಣಾಕ್ಷ ಮತ್ತು ಅನೇಕ ವಿಷಯಗಳನ್ನು ಬಲ್ಲವನು, ಅವನು ಕನಸುಗಳ ಅರ್ಥವನ್ನು ಹೇಳಬಲ್ಲನು, ರಹಸ್ಯಗಳನ್ನು ವಿವರಿಸಬಲ್ಲನು; ಕಠಿಣವಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲನು. ದಾನಿಯೇಲನನ್ನು ಕರೆಯಿಸು. ಅವನು ಗೋಡೆಯ ಮೇಲಿನ ಬರಹದ ಅರ್ಥವನ್ನು ನಿನಗೆ ಹೇಳುತ್ತಾನೆ” ಎಂದು ಹೇಳಿದಳು.


ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ.


ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಾಬಿಲೋನ್ ಸಂಸ್ಥಾನದ ದೊಡ್ಡ ಅಧಿಕಾರಿಗಳನ್ನಾಗಿ ನೇಮಿಸಬೇಕೆಂದು ದಾನಿಯೇಲನು ಅರಸನನ್ನು ಕೇಳಿಕೊಂಡನು. ದಾನಿಯೇಲನು ಹೇಳಿದಂತೆ ಅರಸನು ಮಾಡಿದನು. ದಾನಿಯೇಲನು ಅರಸನ ಸನ್ನಿಧಿಯಲ್ಲಿರುವ ಪ್ರಮುಖರಲ್ಲಿ ಒಬ್ಬನಾದನು.


ಆಗ ಅರಸನಾದ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಆದೇಶಕೊಟ್ಟನು. ಅಶ್ಪೆನಜನು ಅರಸನ ಸೇವೆಯಲ್ಲಿದ್ದ ಎಲ್ಲಾ ಕಂಚುಕಿಯರಿಗೆ ಮುಖಂಡನಾಗಿದ್ದನು. ಅರಸನು ಕೆಲವು ಜನ ಇಸ್ರೇಲರನ್ನು ತನ್ನ ಅರಮನೆಗೆ ಸೇರಿಸಬೇಕೆಂದು ಅಶ್ಪೆನಜನಿಗೆ ಹೇಳಿದನು. ನೆಬೂಕದ್ನೆಚ್ಚರನು ಇಸ್ರೇಲರ ರಾಜವಂಶೀಯರನ್ನು ಮತ್ತು ಪ್ರಮುಖ ಮನೆತನದವರನ್ನು ತನ್ನ ಅರಮನೆಗೆ ಸೇರಿಸಬಯಸಿದನು.


ಬಾಬಿಲೋನ್ ರಾಜನು ಮತ್ತನ್ಯನನ್ನು ಹೊಸ ರಾಜನನ್ನಾಗಿ ನೇಮಿಸಿದನು. ಅವನು ಯೆಹೋಯಾಖೀನನ ಸ್ಥಳವನ್ನು ಪಡೆದನು. ಮತ್ತನ್ಯನು ಯೆಹೋಯಾಖೀನನ ಚಿಕ್ಕಪ್ಪ. ಬಾಬಿಲೋನ್ ರಾಜನು ಮತ್ತನ್ಯನ ಹೆಸರನ್ನು ಚಿದ್ಕೀಯ ಎಂದು ಬದಲಾಯಿಸಿದನು.


ಫರೋಹ ನೆಕೋವನು ಯೋಷೀಯನ ಮಗನಾದ ಎಲ್ಯಾಕೀಮನನ್ನು ಹೊಸರಾಜನನ್ನಾಗಿ ಮಾಡಿ ಎಲ್ಯಾಕೀಮನ ಹೆಸರನ್ನು ಯೆಹೋಯಾಕೀಮನೆಂದು ಬದಲಾಯಿಸಿದನು. ಯೆಹೋವಾಹಾಜನನ್ನು ಫರೋಹ ನೆಕೋವನು ಈಜಿಪ್ಟಿಗೆ ಕರೆದೊಯ್ದುನು. ಯೆಹೋವಾಹಾಜನು ಈಜಿಪ್ಟಿನಲ್ಲಿ ಸತ್ತುಹೋದನು.


ಅರಸನು ದಾನಿಯೇಲನಿಗೆ (ಬೇಲ್ತೆಶಚ್ಚರನಿಗೆ), “ನೀನು ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಬಲ್ಲೆಯಾ?” ಎಂದು ಕೇಳಿದನು.


ಫರೋಹನು ಯೋಸೇಫನಿಗೆ, ಸಾಫ್ನತ್ಪನ್ನೇಹ ಎಂಬ ಹೆಸರನ್ನು ಕೊಟ್ಟನು. ಇದಲ್ಲದೆ ಫರೋಹನು ಯೋಸೇಫನಿಗೆ ಆಸನತ್ ಎಂಬಾಕೆಯನ್ನು ಮದುವೆ ಮಾಡಿಸಿದನು. ಆಕೆ ಓನ್ ನಗರದ ಆಚಾರ್ಯನಾಗಿದ್ದ ಫೋಟೀಫರನ ಮಗಳು. ಹೀಗೆ ಯೋಸೇಫನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾದನು.


ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು.


ಕೋರೆಷನು ಪಾರಸಿಯ ರಾಜನಾಗಿದ್ದನು. ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. (ದಾನಿಯೇಲನ ಇನ್ನೊಂದು ಹೆಸರು ಬೇಲ್ತೆಶಚ್ಚರ.) ಈ ಸಂಗತಿ ಸತ್ಯವಾದುದು; ಆದರೆ ತಿಳಿದುಕೊಳ್ಳಲು ಬಹಳ ಕಷ್ಟಕರವಾಗಿತ್ತು. ದಾನಿಯೇಲನು ಈ ಸಂಗತಿಯನ್ನು ತಿಳಿದುಕೊಂಡನು. ಒಂದು ದರ್ಶನದಲ್ಲಿ ಅದರ ಬಗ್ಗೆ ಅವನಿಗೆ ವಿವರಿಸಲಾಯಿತು.


ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು