ದಾನಿಯೇಲ 1:10 - ಪರಿಶುದ್ದ ಬೈಬಲ್10 ಆದರೆ ಅಶ್ಪೆನಜನು ದಾನಿಯೇಲನಿಗೆ, “ನಾನು ನನ್ನ ಒಡೆಯನಾದ ಅರಸನಿಗೆ ಹೆದರುತ್ತೇನೆ. ಈ ಆಹಾರ ಮತ್ತು ಪಾನೀಯಗಳನ್ನು ನಿನಗೆ ಕೊಡಬೇಕೆಂದು ಅರಸನು ಅಪ್ಪಣೆ ಮಾಡಿದ್ದಾನೆ. ನೀನು ಈ ಆಹಾರವನ್ನು ತೆಗೆದುಕೊಳ್ಳದಿದ್ದರೆ ಅಶಕ್ತನಾಗಿಯೂ ಅಸ್ವಸ್ಥನಾಗಿಯೂ ಕಾಣಿಸುವೆ. ನೀನು ನಿನ್ನ ವಯಸ್ಸಿನ ಬೇರೆ ತರುಣರಿಗಿಂತ ಸೊರಗಿದವನಾಗಿ ಕಾಣುವೆ. ಅರಸನು ಇದನ್ನು ಗಮನಿಸಿ ನನ್ನ ಮೇಲೆ ಕೋಪಗೊಂಡು ನನ್ನ ತಲೆಯನ್ನೇ ಕತ್ತರಿಸಬಹುದು. ಅದಕ್ಕೆ ನೀನೇ ಹೊಣೆಯಾಗುವೆ” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಆ ವಿಜ್ಞಾಪನೆಯನ್ನು ಕೇಳಿ ಕಂಚುಕಿಯರ ಅಧ್ಯಕ್ಷನು ದಾನಿಯೇಲನಿಗೆ, “ನಿಮಗೆ ಆಹಾರ ಮತ್ತು ಪಾನಗಳನ್ನು ಏರ್ಪಡಿಸಿದ್ದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವುದನ್ನು ನೋಡಿ, ರಾಜನು ನನ್ನ ತಲೆಯನ್ನು ತೆಗೆಯಿಸಲು ನೀವು ಕಾರಣರಾಗುವಿರಿ” ಎಂದು ಭಯ ವ್ಯಕ್ತಪಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆದುದರಿಂದ ಆ ನಾಯಕನು ದಾನಿಯೇಲನಿಗೆ, “ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕ್ಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತೆಗೆಸಬಹುದೆಂಬ ಭಯ ನನಗಿದೆ. ಇದಕ್ಕೆ ನೀವು ಕಾರಣರಾಗಬಹುದಲ್ಲವೆ?” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಆ ವಿಜ್ಞಾಪನೆಯನ್ನು ಕೇಳಿ ಕಂಚುಕಿಯರ ಅಧ್ಯಕ್ಷನು ದಾನಿಯೇಲನಿಗೆ - ನಿಮಗೆ ಆಹಾರಪಾನಗಳನ್ನು ಏರ್ಪಡಿಸಿದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವದನ್ನು ನೋಡುವನೆಂದು ಭಯಪಡುತ್ತೇನೆ; ರಾಜನು ನನ್ನ ತಲೆಯನ್ನು ತೆಗಿಸಲು ಕಾರಣರಾದೀರಿ ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಕಂಚುಕಿಯ ಯಜಮಾನನು ದಾನಿಯೇಲನಿಗೆ, “ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯ ಅರಸನಿಗೆ ನಾನು ಭಯಪಡುತ್ತೇನೆ. ಏಕೆಂದರೆ ಅರಸನು ಏಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಇತರ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು. ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ?” ಎಂದನು. ಅಧ್ಯಾಯವನ್ನು ನೋಡಿ |