ತೀತನಿಗೆ 3:3 - ಪರಿಶುದ್ದ ಬೈಬಲ್3 ಮೊದಲು ನಾವು ಸಹ ಅವಿವೇಕಿಗಳಾಗಿದ್ದೆವು. ನಾವು ವಿಧೇಯರಾಗಿರಲಿಲ್ಲ. ನಾವು ಮೋಸಹೋಗಿದ್ದೆವು. ಅನೇಕ ಬಗೆಯ ಆಸೆಗಳಿಗೆ ಮತ್ತು ಭೋಗಗಳಿಗೆ ದಾಸರಾಗಿದ್ದೆವು; ಕೆಟ್ಟದ್ದನ್ನು ಮಾಡುವವರೂ ಹೊಟ್ಟೆಕಿಚ್ಚುಳ್ಳವರೂ ಆಗಿದ್ದೆವು. ಜನರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಕಾಲಕಳೆಯುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 ಕಶ್ಯಾಕ್ ಮಟ್ಲ್ಯಾರ್ ಎಕ್ ಕಾಲ್ ಹೊತ್ತೊ ತನ್ನಾ ಅಮಿ ಪಿಶೆ ಸರ್ಕೆ ಹೊತ್ತ್ಯಾಂವ್, ಸಾಂಗಲೆ ಆಯ್ಕಿ ನಸಲ್ಲೆ ಅನಿ ಚುಕಿದಾರ್ ಹೊತ್ತ್ಯಾಂವ್. ಬುರ್ಶಿ ಆಸ್ಯಾ ಕರ್‍ತಲೆ ಅನಿ ಸಗ್ಳ್ಯಾ ನಮುನ್ಯಾಚ್ಯಾ ಸುಕಾನ್ ರ್‍ಹಾತಲ್ಯಾಚಿ ಗುಲಾಮಾ ಹೊಲ್ಲ್ಯಾಂವ್, ಅಮಿ ಬುರ್ಶೆಪಾನ್ ಅನಿ ಖುದ್ಗೆಪಾನಾನ್ ಅಮ್ಚೊ ಎಳ್ ಖರ್ಚು ಲಾಗಲ್ಲಾವ್, ಲೊಕಾನಿ ಅಮ್ಕಾ ಬುರ್ಶೆ ಕರಲ್ಲ್ಯಾ ಸಾರ್ಕೆಚ್ ಅಮಿಬಿ ಎಕಾಮೆಕಾಕ್ ಬುರ್ಶೆ ಕರಿತ್ ಹೊತ್ತ್ಯಾಂವ್ . ಅಧ್ಯಾಯವನ್ನು ನೋಡಿ |