ತೀತನಿಗೆ 1:12 - ಪರಿಶುದ್ದ ಬೈಬಲ್12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12-13 ಕ್ರೇಟ್‍ನವನೇ ಆದ ಅವರ ಪ್ರವಾದಿಯೊಬ್ಬನು ಸ್ವಜನರ ವಿಷಯವಾಗಿ ಹೀಗೆಂದಿದ್ದಾನೆ: ‘ಕ್ರೇಟ್ ನಿವಾಸಿಗಳು ಸದಾ ಸುಳ್ಳುಗಾರರು, ದುಷ್ಟಮೃಗಗಳು, ಸೋಮಾರಿಗಳು ಮತ್ತು ಹೊಟ್ಟೆಬಾಕರು’ - ಈ ಮಾತು ನಿಜವಾದುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳೂ ಸೋಮಾರಿಗಳಾದ ಹೊಟ್ಟೇಬಾಕರೂ ಆಗಿದ್ದಾರೆಂದು ಅವರಲ್ಲಿಯೇ ಹುಟ್ಟಿದ ಒಬ್ಬ ಪ್ರವಾದಿಯು ಹೇಳಿದನು. ಈ ಸಾಕ್ಷಿಯು ನಿಜವೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 “ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳಂಥವರೂ ಸೋಮಾರಿಗಳಾದ ಹೊಟ್ಟೆಬಾಕರೂ ಆಗಿದ್ದಾರೆ!” ಎಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ತೆಂಚ್ಯಾತ್ಲ್ಯಾ ಕ್ರೆತ್ ಗಾಂವಾತ್ಲ್ಯಾ ಎಕ್ ಪ್ರವಾದ್ಯಾನುಚ್ ಅಶೆ ಮಟ್ಲ್ಯಾನಾಯ್ ಕ್ರೆತಾತ್ಲಿ ಲೊಕಾ ಕನ್ನಾಬಿ ಝುಟೆ ಬೊಲ್ತಲ್ಲಿ ಅನಿ ಭಯಂಕರ್ ಜನಾವರಾ ಸಾರ್ಕಿ, ಅನಿ ಅಸ್ ಬುರ್ಕಿ ಅನಿ ಆಳ್ಸಿ ಮಾನ್ಸಾ ಮನುನ್. ಅಧ್ಯಾಯವನ್ನು ನೋಡಿ |
ಆ ರೇವು (ಸುರಕ್ಷಿತ ರೇವು) ಚಳಿಗಾಲದಲ್ಲಿ ಹಡಗು ನಿಲ್ಲುವುದಕ್ಕೆ ಒಳ್ಳೆಯ ಸ್ಥಳವಾಗಿರಲಿಲ್ಲ. ಆದ್ದರಿಂದ ಹಡಗು ಅಲ್ಲಿಂದ ಹೊರಡಲೇಬೇಕೆಂದು ಹೆಚ್ಚುಮಂದಿ ನಿರ್ಧರಿಸಿದರು. ನಾವು ಫೆನಿಕ್ಸ್‌ಗೆ ತಲುಪಬಹುದೆಂದು ಅವರ ನಿರೀಕ್ಷೆಯಾಗಿತ್ತು. ಚಳಿಗಾಲದಲ್ಲಿ ಹಡಗು ಅಲ್ಲಿ ತಂಗಬಹುದಾಗಿತ್ತು. ಫೆನಿಕ್ಸ್ ಕ್ರೇಟ್ ದ್ವೀಪದ ಒಂದು ಪಟ್ಟಣ. ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದ್ದ ಬಂದರನ್ನು ಅದು ಹೊಂದಿತ್ತು.