ಜ್ಞಾನೋಕ್ತಿಗಳು 29:1 - ಪರಿಶುದ್ದ ಬೈಬಲ್1 ಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಎಷ್ಟು ಗದರಿಸಿದರೂ ತಗ್ಗದ ಹಟಮಾರಿ ಫಕ್ಕನೆ ಬೀಳುವನು, ಮತ್ತೆ ಏಳನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಬಹಳವಾಗಿ ಗದರಿಸಿದರೂ ತಗ್ಗದವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಅನೇಕಬಾರಿ ಗದರಿಸಿದರೂ ತಗ್ಗದ ಹಟಮಾರಿ ಪರಿಹಾರವಿಲ್ಲದೆ ಫಕ್ಕನೆ ಮುರಿದು ಬೀಳುವನು. ಅಧ್ಯಾಯವನ್ನು ನೋಡಿ |
ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು.
ಯೆಹೋವನಾದ ನಾನು ಯೆಹೋಯಾಕೀಮ ಮತ್ತು ಅವನ ಮಕ್ಕಳನ್ನು ದಂಡಿಸುವೆನು. ನಾನು ಅವನ ಅಧಿಕಾರಿಗಳನ್ನೂ ದಂಡಿಸುವೆನು. ಅವರು ದುಷ್ಟರಾದುದರಿಂದ ಹೀಗೆ ಮಾಡುವೆನು. ನಾನು ಅವರ ಮೇಲೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೆಲ್ಲರ ಮೇಲೂ ಮತ್ತು ಯೆಹೂದದ ಜನರ ಮೇಲೂ ಭಯಂಕರವಾದ ಕೇಡನ್ನು ತರಲು ನಿಶ್ಚಯಿಸಿದ್ದೇನೆ. ನಾನು ಹೇಳಿದಂತೆ ಅವರಿಗೆ ಎಲ್ಲಾ ಕೆಡುಕನ್ನು ಉಂಟುಮಾಡುವೆನು. ಏಕೆಂದರೆ ಅವರು ನನ್ನ ಮಾತನ್ನು ಕೇಳಲಿಲ್ಲ.’”
ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ? ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ? ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ. ನೀನು ಹೀಗೇಕೆ ಮಾಡಿದೆ? ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು, ಆದರೆ ಒಳ್ಳೆಯದೇನೂ ಆಗಲಿಲ್ಲ. ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು. ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.