Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 25:19 - ಪರಿಶುದ್ದ ಬೈಬಲ್‌

19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು ಕುಂಟಕಾಲನ್ನು ನಂಬಿದಂತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು ಮುರುಕಹಲ್ಲು, ಜಾರುವ ಕಾಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಕಷ್ಟಕಾಲದಲ್ಲಿ ಅಪನಂಬಿಗಸ್ತನಾದ ಮನುಷ್ಯನಲ್ಲಿಯ ಭರವಸೆಯು ಮುರಿದ ಹಲ್ಲು, ಕೀಲು ತಪ್ಪಿದ ಪಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 25:19
8 ತಿಳಿವುಗಳ ಹೋಲಿಕೆ  

ಈಜಿಪ್ಟು ನಿನಗೆ ಸಹಾಯ ಮಾಡುವುದೆಂದು ನಂಬಿರುವಿಯಾ? ಈಜಿಪ್ಟು ಒಂದು ಮುರಿದ ದಂಟು. ಅದರ ಮೇಲೆ ನೀನು ಭಾರಹಾಕಿದರೆ ಅದು ನಿನ್ನ ಅಂಗೈಯಲ್ಲಿ ರಂಧ್ರಮಾಡುವುದು. ಈಜಿಪ್ಟಿನ ರಾಜನಾದ ಫರೋಹನ ಸಹಾಯಕ್ಕಾಗಿ ಆಶ್ರಯಿಸಿಕೊಂಡ ಯಾವ ಜನರೂ ಅವನಲ್ಲಿ ಭರವಸೆ ಇಡಲಾಗದು.


ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ.


ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.


ಈಜಿಪ್ಟ್ ಯಾವ ಪ್ರಯೋಜನಕ್ಕೂ ಬಾರದು. ಅದರ ಸಹಾಯವು ಏನೂ ಅಲ್ಲ. ಅದಕ್ಕಾಗಿ ನಾನು ಈಜಿಪ್ಟನ್ನು “ಏನೂ ಮಾಡದ ದೈತ್ಯಾಕಾರದ ಮೃಗ” ಎಂದು ಕರೆಯುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು