Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 24:8 - ಪರಿಶುದ್ದ ಬೈಬಲ್‌

8 ಕೇಡುಮಾಡುವವನನ್ನು ಜನರು “ಕೆಡುಕ” ಎಂದು ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಕೇಡನ್ನು ಕಲ್ಪಿಸುವವನು, ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಕೇಡನ್ನು ಯೋಚಿಸುವವನು ತುಂಟನು ಎನಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಕೇಡನ್ನು ಕಲ್ಪಿಸುವವನು ಕುಯುಕ್ತಿಕನು ಎನಿಸಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಕೇಡನ್ನು ಕಲ್ಪಿಸುವವನು ಕುಚೋದ್ಯಗಾರನೆಂದು ಕರೆಯಲ್ಪಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 24:8
12 ತಿಳಿವುಗಳ ಹೋಲಿಕೆ  

ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು. ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.


ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾರೆ; ದೇವರನ್ನು ದ್ವೇಷಿಸುತ್ತಾರೆ. ಅವರು ಸೊಕ್ಕಿನವರೂ ಅಹಂಕಾರಿಗಳೂ ಮತ್ತು ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವವರೂ ಆಗಿದ್ದಾರೆ. ಅವರು ಕೇಡಿನ ಮಾರ್ಗಗಳನ್ನು ಹುಡುಕುವವರೂ ತಂದೆತಾಯಿಗಳಿಗೆ ಅವಿಧೇಯರೂ ಮೂರ್ಖರೂ ಆಗಿದ್ದಾರೆ.


ದುರ್ಮಾರ್ಗಿಯು ದಾರಿ ತಪ್ಪುವನು. ಒಳ್ಳೆಯದನ್ನು ಮಾಡಲು ಪ್ರಯತ್ನಿಸುವವನು ಪ್ರೀತಿಗೂ ಭರವಸೆಗೂ ಪಾತ್ರನಾಗುವನು.


ದುರಾಲೋಚನೆ ಮಾಡುವ ಹೃದಯ, ಕೇಡುಮಾಡಲು ಓಡುವ ಕಾಲು.


ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ.


ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು. ದುರಾಲೋಚನೆಯನ್ನು ಕೊಟ್ಟನು.


ದುಷ್ಟನು ದುಷ್ಟತನವನ್ನು ಉಪಕರಣವನ್ನಾಗಿ ಬಳಸಿಕೊಳ್ಳುವನು. ಬಡಜನರಿಂದ ಪ್ರತಿಯೊಂದನ್ನು ತೆಗೆದುಕೊಳ್ಳಲು ಅವನು ಆಲೋಚಿಸುವನು, ಸುಳ್ಳುಗಳನ್ನು ಹೇಳುವನು. ಅವನ ಸುಳ್ಳುಗಳು ಬಡವನಿಗೆ ನ್ಯಾಯದೊರಕದಂತೆ ಮಾಡುತ್ತವೆ.


ಮೂಢನ ಆಲೋಚನೆಗಳೆಲ್ಲಾ ಪಾಪಮಯ. ದುರಾಭಿಮಾನಿಯು ಜನರಿಗೆ ಅಸಹ್ಯ.


ಅವರು ಕೇಡು ಮಾಡಲು ತಮ್ಮ ಹೃದಯಗಳಲ್ಲಿ ಆಲೋಚಿಸಿಕೊಳ್ಳುವರು; ಅವರು ಕೇಡನ್ನೇ ಕುರಿತು ಮಾತಾಡುವರು.


ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು