Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 23:7 - ಪರಿಶುದ್ದ ಬೈಬಲ್‌

7 ಅವನು ವೆಚ್ಚದ ಬಗ್ಗೆ ಯೋಚಿಸುವಂಥವನು. ಅವನು ನಿನಗೆ, “ತಿನ್ನು, ಕುಡಿ” ಎಂದು ಹೇಳಿದರೂ ಅವನ ಉದ್ದೇಶವೇ ಬೇರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ, ಉಣ್ಣು, ಕುಡಿ ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅವನು ತನ್ನ ಮನದಲ್ಲೆ ಲೆಕ್ಕಿಸುತ್ತಿರುತ್ತಾನೆ “ಉಣ್ಣು, ಕುಡಿ” ಎಂದರೂ; ಅವನಿಗಿಲ್ಲ ನಿನ್ನ ಮೇಲೆ ಅಕ್ಕರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ; ಉಣ್ಣು, ಕುಡಿ, ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ ಯೋಚನೆಯುಳ್ಳವನಂತೆ ಇದ್ದಾನೆ; ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 23:7
12 ತಿಳಿವುಗಳ ಹೋಲಿಕೆ  

ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು. ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು.


ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು; ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು. ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.


ಆಗ ದೆಲೀಲಳು ಸಂಸೋನನಿಗೆ, “‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀನು ಹೇಗೆ ಹೇಳಲು ಸಾಧ್ಯ? ನನ್ನನ್ನು ನೀನು ನಂಬುವುದೇ ಇಲ್ಲ. ನೀನು ನನಗೆ ನಿನ್ನ ರಹಸ್ಯವನ್ನು ತಿಳಿಸುವುದಿಲ್ಲ. ಮೂರನೆಯ ಸಲ ನೀನು ನನ್ನನ್ನು ವಂಚಿಸಿದೆ. ನೀನು ನನಗೆ ನಿನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ” ಎಂದಳು.


ದುರಾಶೆಯುಳ್ಳವನಿಗೆ ಅವನ ದುರಾಶೆಯೇ ಅವಮಾನಕರ. ಸುಳ್ಳು ಹೇಳುವುದಕ್ಕಿಂತ ಬಡವನಾಗಿರುವುದೇ ಮೇಲು.


ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.


ಆ ಇಬ್ಬರು ಅರಸರು ಒಬ್ಬರಿಗೊಬ್ಬರು ಕೇಡುಮಾಡಬೇಕೆಂದು ನಿಶ್ಚಯಿಸುವರು. ಅವರಿಬ್ಬರೂ ಒಂದೇ ಮೇಜಿನಲ್ಲಿ ಕುಳಿತುಕೊಳ್ಳುವರು ಮತ್ತು ಒಬ್ಬರಿಗೊಬ್ಬರು ಸುಳ್ಳು ಹೇಳುವರು. ಆದರೆ ಇದರಿಂದ ಅವರಿಬ್ಬರಲ್ಲಿ ಯಾರಿಗೂ ಒಳ್ಳೆಯದಾಗುವದಿಲ್ಲ. ಏಕೆಂದರೆ ದೇವರು ಅವರ ಅಂತ್ಯಕಾಲವನ್ನು ನಿರ್ಧರಿಸಿದ್ದಾನೆ.


ಕೆಡುಕನು ತಾನು ಹೇಳುವ ಸಂಗತಿಗಳ ಮೂಲಕ ತನ್ನನ್ನು ಒಳ್ಳೆಯವನನ್ನಾಗಿ ತೋರಿಸಿಕೊಳ್ಳುವನು. ಆದರೆ ಅವನು ತನ್ನ ಕೆಟ್ಟ ಆಲೋಚನೆಗಳನ್ನು ತನ್ನ ಹೃದಯದಲ್ಲಿ ಅಡಗಿಸಿಕೊಳ್ಳುವನು.


ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ.


ಕೆಟ್ಟ ಆಲೋಚನೆಯನ್ನು ಅಡಗಿಸಿಡುವ ಕನಿಕರದ ಮಾತುಗಳು ಕಡಿಮೆ ಬೆಲೆಯ ಮಡಿಕೆಯ ಮೇಲಿನ ಬೆಳ್ಳಿಯ ಲೇಪನದಂತಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು