ಜ್ಞಾನೋಕ್ತಿಗಳು 20:25 - ಪರಿಶುದ್ದ ಬೈಬಲ್25 ನೀನು ದೇವರಿಗೆ ಹರಕೆ ಮಾಡುವ ಮೊದಲೇ ಎಚ್ಚರಿಕೆಯಿಂದ ಯೋಚಿಸು. ಹರಕೆ ಮಾಡಿದ ಮೇಲೆ ಹರಕೆ ಮಾಡಬಾರದಾಗಿತ್ತು ಎಂದು ಹೇಳಬೇಡ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 “ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ದುಡುಕಿ ದೇವರಿಗೆ ಮುಡಿಪುಕಟ್ಟುವುದು, ಹರಕೆ ಹೊತ್ತ ಮೇಲೆ ವಿಚಾರಮಾಡುವುದು, ಉರುಳಿಗೆ ಸಿಕ್ಕಿಕೊಂಡಂತೆ ಆಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ದುಡುಕಿ ಮುಡುಪುಕಟ್ಟುವದು ಮನುಷ್ಯನಿಗೆ ಉರುಲು; ಹರಕೆಹೊತ್ತ ಮೇಲೆ ವಿಚಾರಪಡಬೇಕಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು ಆಮೇಲೆ ವಿಚಾರಿಸುವುದು ಉರುಲಾಗಿದೆ. ಅಧ್ಯಾಯವನ್ನು ನೋಡಿ |
ಆ ಯುವತಿಯರ ತಂದೆಗಳಾಗಲಿ ಸಹೋದರರಾಗಲಿ ನಮ್ಮಲ್ಲಿಗೆ ಬಂದು ದೂರು ಹೇಳುತ್ತಾರೆ. ಆಗ ನಾವು ಅವರಿಗೆ, ‘ಬೆನ್ಯಾಮೀನ್ಯರ ಗಂಡಸರಿಗೆ ದಯೆತೋರಿಸಿರಿ; ಅವರು ಆ ಸ್ತ್ರೀಯರನ್ನು ಮದುವೆಯಾಗಲಿ. ಅವರು ನಿಮ್ಮಿಂದ ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ಹೋಗಿರುವರೇ ಹೊರತು ಯುದ್ಧವೇನೂ ಮಾಡಿಲ್ಲ. ಅವರು ಕನ್ಯೆಯರನ್ನು ತೆಗೆದುಕೊಂಡು ಹೋದದ್ದರಿಂದ ನೀವು ದೇವರೆದುರಿಗೆ ಮಾಡಿದ ಪ್ರತಿಜ್ಞೆಯನ್ನು ಮುರಿದಂತಾಗುವುದಿಲ್ಲ. ನಿಮ್ಮ ಕನ್ಯೆಯರನ್ನು ಅವರಿಗೆ ಕೊಡುವುದಿಲ್ಲವೆಂದು ನೀವು ಪ್ರತಿಜ್ಞೆ ಮಾಡಿದ್ದೀರಿ. ನೀವು ಬೆನ್ಯಾಮೀನ್ಯರಿಗೆ ನಿಮ್ಮ ಕನ್ಯೆಯರನ್ನು ಕೊಟ್ಟಿಲ್ಲ. ಆದರೆ ಅವರು ನಿಮ್ಮ ಕನ್ಯೆಯರನ್ನು ತೆಗೆದುಕೊಂಡು ಹೋದರು. ಆದ್ದರಿಂದ ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಲಿಲ್ಲ’ ಎಂದು ಹೇಳುತ್ತೇವೆ” ಎಂದರು.