ಜ್ಞಾನೋಕ್ತಿಗಳು 14:3 - ಪರಿಶುದ್ದ ಬೈಬಲ್3 ಮೂಢನ ಮಾತುಗಳು ಅವನಿಗೇ ತೊಂದರೆಯನ್ನು ಉಂಟುಮಾಡುತ್ತವೆ. ಜ್ಞಾನಿಯ ಮಾತುಗಳಾದರೋ ಅವನನ್ನು ಕಾಪಾಡುತ್ತವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವದು; ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ, ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು. ಅಧ್ಯಾಯವನ್ನು ನೋಡಿ |
ನಾಲ್ಕನೆಯ ಪ್ರಾಣಿಯ ತಲೆಯ ಮೇಲಿದ್ದ ಹತ್ತು ಕೊಂಬುಗಳ ಬಗ್ಗೆ ನಾನು ತಿಳಿದುಕೊಳ್ಳಬಯಸಿದೆ. ನಾನು ಅಲ್ಲಿ ಮೊಳೆತ ಚಿಕ್ಕ ಕೊಂಬಿನ ಬಗ್ಗೆ ತಿಳಿದುಕೊಳ್ಳಬಯಸಿದೆ. ಆ ಚಿಕ್ಕ ಕೊಂಬು ಅಲ್ಲಿದ್ದ ಹತ್ತು ಕೊಂಬುಗಳಲ್ಲಿ ಮೂರನ್ನು ಬೀಳಿಸಿಬಿಟ್ಟಿತು. ಈ ಚಿಕ್ಕ ಕೊಂಬು ಉಳಿದ ಕೊಂಬುಗಳಿಗಿಂತ ಕೀಳಾಗಿ ಕಂಡುಬಂತು. ಅದಕ್ಕೆ ಮನುಷ್ಯರ ಕಣ್ಣುಗಳಂತೆ ಕಣ್ಣುಗಳಿದ್ದವು. ಆ ಚಿಕ್ಕ ಕೊಂಬು ಜಂಬ ಕೊಚ್ಚಿಕೊಳ್ಳುತ್ತಿತ್ತು.