ಜ್ಞಾನೋಕ್ತಿಗಳು 13:4 - ಪರಿಶುದ್ದ ಬೈಬಲ್4 ಸೋಮಾರಿಯ ಆಸೆಗಳೆಲ್ಲಾ ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ. ಕಷ್ಟಪಟ್ಟು ದುಡಿಯುವವನು ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಸೋಮಾರಿಯ ಆಶೆಯು ವ್ಯರ್ಥ; ಉದ್ಯೋಗಿಯ ಆತ್ಮಕ್ಕೆ ಪುಷ್ಟಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ; ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು. ಅಧ್ಯಾಯವನ್ನು ನೋಡಿ |
ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
ತರುವಾಯ ಆ ಜನರು ಯೆಹೋಶುವನಲ್ಲಿಗೆ ಬಂದು, “ಆಯಿ ಒಂದು ದುರ್ಬಲ ಪ್ರದೇಶವಾಗಿದೆ, ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಮ್ಮ ಎಲ್ಲ ಜನರು ಬೇಕಾಗುವುದಿಲ್ಲ. ಅಲ್ಲಿ ಯುದ್ಧ ಮಾಡಲು ಎರಡು ಅಥವಾ ಮೂರುಸಾವಿರ ಜನರನ್ನು ಕಳುಹಿಸಿದರೆ ಸಾಕು, ಇಡೀ ಸೈನ್ಯವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಅಲ್ಲಿ ನಮ್ಮ ವಿರುದ್ಧ ಹೋರಾಡಬಲ್ಲ ಕೆಲವೇ ಜನರು ಇದ್ದಾರೆ” ಎಂದು ಹೇಳಿದರು.