ಯೆಹೋವನು ಹೀಗೆನ್ನುತ್ತಾನೆ: “ಜೋರ್ಡನ್ ನದಿಯ ಸಮೀಪದ ದಟ್ಟವಾದ ಅರಣ್ಯದಿಂದ ಒಮ್ಮೆ ಒಂದು ಸಿಂಹವು ಬರುವುದು. ಆ ಸಿಂಹವು ಜನರ ಸಾಕುಪ್ರಾಣಿಗಳಿದ್ದ ಹೊಲಗಳಿಗೆ ನುಗ್ಗುವುದು. ಆ ಪ್ರಾಣಿಗಳೆಲ್ಲ ಓಡಿಹೋಗುವವು. ನಾನು ಆ ಸಿಂಹದಂತಾಗುವೆನು. ನಾನು ಬಾಬಿಲೋನನ್ನು ಅದರ ಪ್ರದೇಶದಿಂದ ಓಡಿಸಿಬಿಡುವೆನು. ಈ ಕಾರ್ಯ ಮಾಡಲು ನಾನು ಯಾರನ್ನು ಆರಿಸಲಿ? ನನ್ನತೆ ಯಾರೂ ಇಲ್ಲ. ನನ್ನನ್ನು ಪ್ರತಿಭಟಿಸುವವರು ಯಾರೂ ಇಲ್ಲ. ಆದ್ದರಿಂದ ನಾನೇ ಅದನ್ನು ಮಾಡುತ್ತೇನೆ. ನನ್ನನ್ನು ಓಡಿಸಲು ಯಾವ ಕುರುಬನೂ ಬರಲಾರನು. ನಾನು ಬಾಬಿಲೋನಿನ ಜನರನ್ನು ಓಡಿಸಿಬಿಡುವೆನು.”