ಜೆಕರ್ಯ 11:17 - ಪರಿಶುದ್ದ ಬೈಬಲ್17 ಕೆಲಸಕ್ಕೆ ಬಾರದ ಕುರುಬನೇ, ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ. ಅವನನ್ನು ಶಿಕ್ಷಿಸಿರಿ! ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ. ಆಗ ಅವನ ಬಲಗೈ ಅಪ್ರಯೋಜಕವಾಗುವದು, ಬಲಗಣ್ಣು ದೃಷ್ಟಿಹೀನವಾಗುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ? ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು; ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಮಂದೆಕಾಯದ ಕುರುಬನಿಗೆ ಧಿಕ್ಕಾರ! ತಾಕುವುದು ಅವನ ತೋಳಿಗೂ ಬಲಗಣ್ಣಿಗೂ ಖಡ್ಗ ತೀರಾ ಬತ್ತಿಹೋಗಲಿ ಅವನ ತೋಳು ಪೂರಾ ಮಬ್ಬಾಗಲಿ ಅವನ ಬಲಗಣ್ಣು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಮಂದೆಯನ್ನು ಕಾಯದೆ ಬಿಟ್ಟುಬಿಟ್ಟ ತರವಲ್ಲದ ಕುರುಬನ ಗತಿಯನ್ನು ಏನುಹೇಳಲಿ! ಖಡ್ಗವು ಅವನ ತೋಳಿಗೂ ಬಲಗಣ್ಣಿಗೂ ತಾಕುವದು; ಅವನ ತೋಳು ತೀರಾ ಒಣಗಿಹೋಗುವದು, ಅವನ ಬಲಗಣ್ಣು ಪೂರಾ ಮೊಬ್ಬಾಗುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 “ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಕಷ್ಟ! ಖಡ್ಗವು ಅವನ ತೋಳಿನ ಮೇಲೆಯೂ, ಅವನ ಬಲಗಣ್ಣಿನ ಮೇಲೆಯೂ ಇರುವುದು. ಅವನ ತೋಳು ಪೂರ್ತಿಯಾಗಿ ಒಣಗುವುದು. ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವುದು.” ಅಧ್ಯಾಯವನ್ನು ನೋಡಿ |
ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.
ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.