ಗಲಾತ್ಯದವರಿಗೆ 3:18 - ಪರಿಶುದ್ದ ಬೈಬಲ್18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಅಬ್ರಹಾಮನಿಗೆ ಸಿಕ್ಕ ಆ ಬಾಧ್ಯತೆ ಮೋಶೆಯ ಧರ್ಮಶಾಸ್ತ್ರದ ಮೇಲೆ ಆಧಾರಗೊಂಡಿರುವುದಾದರೆ, ವಾಗ್ದಾನದ ಮೇಲೆ ಆಧಾರವಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದೇವರು ಅಬ್ರಹಾಮನಿಗೆ ಕೊಟ್ಟ ಬಾಧ್ಯತೆಯನ್ನು ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ದೇವರು ನಮಗೆ ಹಕ್ಕುಬಾಧ್ಯತೆಯಾಗಿ ಕೊಡುವುದು ಧರ್ಮಶಾಸ್ತ್ರದಿಂದ ಲಭಿಸುವುದಾದರೆ ಅದು ಇನ್ನು ದೇವವಾಗ್ದಾನದಿಂದ ಲಭಿಸದು ಎಂದಂತಾಯಿತು. ಆದರೆ ದೇವರು ಅದನ್ನು ಅಬ್ರಹಾಮನಿಗೆ ದಯಪಾಲಿಸಿದ್ದು ವಾಗ್ದಾನದ ಮೂಲಕವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಆ ಬಾಧ್ಯತೆಯು ಕರ್ಮಮಾರ್ಗದಿಂದ ದೊರೆಯುವದಾದರೆ ಅದು ಇನ್ನು ವಾಗ್ದಾನದಿಂದ ದೊರೆಯುವದಲ್ಲವೆಂದಾಯಿತು; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಏಕೆಂದರೆ ಆ ಬಾಧ್ಯತೆಯು ನಿಯಮದ ಪ್ರಕಾರವಾಗಿದ್ದರೆ, ಅದು ಇನ್ನು ವಾಗ್ದಾನದ ಮೇಲೆ ಆಧಾರವಾದದ್ದಲ್ಲ. ಆದರೆ ದೇವರು ತಮ್ಮ ಕೃಪೆಯಿಂದ ಅಬ್ರಹಾಮನಿಗೆ ವಾಗ್ದಾನದ ಮೂಲಕವೇ ಆ ಬಾಧ್ಯತೆಯನ್ನು ಕೊಟ್ಟಿದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್18 ಕಶ್ಯಾಕ್ ಮಟ್ಲ್ಯಾರ್ ದೆವಾಚೆ ದೆನೆ ಖಾಯ್ದ್ಯಾಚ್ಯಾ ವರ್‍ತಿ ಹೊಂದುನ್ ಹಾಯ್ ಹೊಲ್ಯಾರ್, ತೆ ತೆಚ್ಯಾ ವರ್‍ತಿ ಹೊಂದುನ್ ನಾ ಮನುನ್ ಹೊಲೆ, ಖರೆ ದೆವಾನ್ ಅಬ್ರಾಹಾಮಾಕ್ ಅಪ್ನಾಚ್ಯಾ ಗೊಸ್ಟಿಕ್ ಲಾಗುನ್ ತೆ ದೆನೆ ದಿಲ್ಲ್ಯಾನ್. ಅಧ್ಯಾಯವನ್ನು ನೋಡಿ |