ಕೊಲೊಸ್ಸೆಯವರಿಗೆ 2:22 - ಪರಿಶುದ್ದ ಬೈಬಲ್22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಇವುಗಳೆಲ್ಲವೂ ಬಳಕೆಯಿಂದ ಅಳಿದುಹೋಗುತ್ತವೆ. ಅಲ್ಲದೆ, ಅವೆಲ್ಲವೂ ಮಾನವ ವ್ಯವಸ್ಥಿತ ಬೋಧನೆ ಹಾಗೂ ನಿಬಂಧನೆಗಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಅದನ್ನು ಮುಟ್ಟಬೇಡ ಎನ್ನುವ ನಿಬಂಧನೆಗಳಿಗೆ ನಿಮ್ಮನ್ನು ಒಳಗಾಗಮಾಡಿಕೊಳ್ಳುವದೇಕೆ? ಆ ಪದಾರ್ಥಗಳೆಲ್ಲವೂ ಬಳಸುವದರಲ್ಲಿ ನಾಶವಾಗುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಈ ಶಾಸನಗಳು ಮಾನವ ಆಜ್ಞೆಗಳ ಹಾಗೂ ಬೋಧನೆಗಳ ಅನುಸಾರವಾಗಿ ಬಳಕೆಯಿಂದ ಅಳಿದುಹೋಗುತ್ತವೆ! ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್22 ಜಗಾಚ್ಯಾ ವಿಶಯಾಂಚಿ ನೆಮಾ ಸಗ್ಳಿ ವಾಪ್ರುನ್ ಹೊಲ್ಲ್ಯಾ ಮಾನಾ, ನಾಸ್ ಹೊವ್ನ್ ಜಾತಾತ್ ತಿ ಸಗ್ಳಿ ಮಾನ್ಸಾಂಚಿ ನೆಮಾ ಅನಿ ಶಿಕಾಪಾ, ದೆವಾಚಿ ನ್ಹಯ್. ಅಧ್ಯಾಯವನ್ನು ನೋಡಿ |
ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.