ಕೀರ್ತನೆಗಳು 95:1 - ಪರಿಶುದ್ದ ಬೈಬಲ್1 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ! ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಬನ್ನಿರಿ, ಯೆಹೋವನಿಗೆ ಉತ್ಸಾಹ ಧ್ವನಿಗೈಯುವಾ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ; ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ. ಅಧ್ಯಾಯವನ್ನು ನೋಡಿ |
ಅಲ್ಲಿ ಹರ್ಷದ ಮತ್ತು ಸಂತೋಷದ ಧ್ವನಿ ಕೇಳಿಬರುವುದು. ಅಲ್ಲಿ ವಧುವರರ ಸಂತೋಷದ ಧ್ವನಿ ಕೇಳಿಸುವುದು. ಜನರು ಯೆಹೋವನ ಆಲಯಕ್ಕೆ ತಮ್ಮ ಕಾಣಿಕೆಗಳನ್ನು ಅರ್ಪಿಸಲು ಬರುವ ಧ್ವನಿಯು ಕೇಳಿಸುವುದು. ಅವರು ‘ಸರ್ವಶಕ್ತನಾದ ಯೆಹೋವನನ್ನು ಸ್ತುತಿಸಿರಿ. ಆತನು ಒಳ್ಳೆಯವನು. ಆತನ ಕರುಣೆಯು ಶಾಶ್ವತವಾಗಿರುವುದು’ ಎಂದು ಹೇಳುವರು. ನಾನು ಯೆಹೂದಕ್ಕೆ ಪುನಃ ಸುಸ್ಥಿತಿಯನ್ನು ತರುವುದರಿಂದ ಜನರು ಹೀಗೆ ಹೇಳುವರು. ಅದು ಮೊದಲಿನಂತೆ ಆಗುವುದು.” ಯೆಹೋವನು ಈ ವಿಷಯಗಳನ್ನು ಹೇಳಿದನು.