ಕೀರ್ತನೆಗಳು 93:4 - ಪರಿಶುದ್ದ ಬೈಬಲ್4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ. ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಜಲರಾಶಿಗಳ ಘೋಷಕ್ಕಿಂತಲೂ, ಮಹಾತರಂಗಗಳ ಗರ್ಜನೆಗಿಂತಲೂ, ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಸಾಗರಗಳ ಗರ್ಜನೆಗಿಂತ I ಸಮುದ್ರ ತರಂಗಗಳಿಗಿಂತ I ಮಹೋನ್ನತ ಪ್ರಭು ಬಲವಂತ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಜಲರಾಶಿಗಳ ಘೋಷಕ್ಕಿಂತಲೂ ಮಹಾತರಂಗಗಳ ಗರ್ಜನೆಗಿಂತಲೂ ಉನ್ನತದಲ್ಲಿರುವ ಯೆಹೋವನ ಮಹಿಮೆಯು ಗಾಂಭೀರ್ಯವುಳ್ಳದ್ದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಮಹಾಸಾಗರದ ಶಬ್ದಕ್ಕಿಂತಲೂ, ಸಮುದ್ರದ ಬಲವಾದ ಅಲೆಗಳಿಗಿಂತಲೂ ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ. ಅಧ್ಯಾಯವನ್ನು ನೋಡಿ |
ನೀವು ನನಗೆ ಅಂಜುವುದಿಲ್ಲವೇ?” ಇದು ಯೆಹೋವನ ಸಂದೇಶ: “ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ? ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ. ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ. ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು. ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.