ಕೀರ್ತನೆಗಳು 89:41 - ಪರಿಶುದ್ದ ಬೈಬಲ್41 ಅವನ ನೆರೆಹೊರೆಯವರು ಅವನನ್ನು ನೋಡಿ ನಗುವರು. ದಾರಿಯಲ್ಲಿ ಹಾದುಹೋಗುವವರು ಅವನಿಂದ ವಸ್ತುಗಳನ್ನು ಕದ್ದುಕೊಳ್ಳುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201941 ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ; ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)41 ಸುಲಿಗೆ ಮಾಡುತಿಹರವನನು ದಾರಿಗರೆಲ್ಲರು I ಪರಿಹಾಸ್ಯಕ್ಕೆ ಈಡುಮಾಡುತಿಹರು ನೆರೆಯವರು II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)41 ದಾರಿಗರೆಲ್ಲರೂ ಅವನನ್ನು ಸುಲಿಗೆಮಾಡುತ್ತಾರೆ; ಸುತ್ತಣವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ41 ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ. ತನ್ನ ನೆರೆಯವರಿಗೆ ಅವನು ನಿಂದೆಯಾಗಿದ್ದಾನೆ. ಅಧ್ಯಾಯವನ್ನು ನೋಡಿ |
ಯೆಹೋವನೇ, ನಾವು ಮತ್ತು ನಮ್ಮ ಪೂರ್ವಿಕರು ನಿನಗೆ ಪಾಪಮಾಡಿದ್ದರಿಂದ ಇದೆಲ್ಲಾ ಆಗುತ್ತಿದೆ. ಜೆರುಸಲೇಮಿನ ಮೇಲೆ ಕೋಪ ಮಾಡುವದನ್ನು ದಯವಿಟ್ಟು ನಿಲ್ಲಿಸು. ಜೆರುಸಲೇಮ್ ನಗರವು ನಿನ್ನ ಪವಿತ್ರವಾದ ಬೆಟ್ಟದ ಮೇಲೆ ಇದೆ. ನೀನು ಸರಿಯಾದದ್ದನ್ನು ಮಾಡುವೆ. ಆದ್ದರಿಂದ ಜೆರುಸಲೇಮಿನ ಮೇಲೆ ಕೋಪಗೊಳ್ಳುವದನ್ನು ದಯವಿಟ್ಟು ನಿಲ್ಲಿಸಿಬಿಡು. ನಮ್ಮ ಸುತ್ತಮುತ್ತಲಿನ ಜನರೆಲ್ಲ ನಮ್ಮನ್ನು ನಿಂದಿಸುವರು ಮತ್ತು ನಮ್ಮ ಜನರನ್ನು ಗೇಲಿ ಮಾಡುವರು.
ಯೆಹೂದದಲ್ಲಿ ಅಳಿದುಳಿದ ಕೆಲವು ಜನರಿದ್ದರು. ಆ ಜನರು ಈಜಿಪ್ಟಿನಲ್ಲಿ ನೆಲೆಸಲು ಬಂದರು. ಆದರೆ ನಾನು ಯೆಹೂದಕುಲದ ಆ ಕೆಲವು ಅಳಿದುಳಿದವರನ್ನು ನಾಶಮಾಡುವೆನು. ಅವರು ಕತ್ತಿಗಳಿಂದ ಕೊಲ್ಲಲ್ಪಡುವರು; ಹಸಿವಿನಿಂದ ಸತ್ತುಹೋಗುವರು. ಬೇರೆ ಜನಾಂಗಗಳ ಜನರು ಅವರ ಬಗ್ಗೆ ನಿಂದಿಸುವಂತೆ ಅವರ ಸ್ಥಿತಿ ಆಗುವುದು. ಅವರಿಗೆ ಉಂಟಾದ ದುರ್ಗತಿಯನ್ನು ನೋಡಿ ಬೇರೆ ಜನಾಂಗದ ಜನರು ಭಯಪಡುವರು. ಆ ಜನರು ಶಾಪದ ಶಬ್ಧವಾಗುವರು. ಬೇರೆ ಜನಾಂಗದವರು ಯೆಹೂದದ ಆ ಜನರಿಗೆ ಅಪಮಾನ ಮಾಡುವರು.
ನೀವು ವಿಗ್ರಹಗಳನ್ನು ಮಾಡಿ ನನ್ನನ್ನು ಏಕೆ ಸಿಟ್ಟಿಗೆಬ್ಬಿಸುವಿರಿ? ಈಗ ನೀವು ಈಜಿಪ್ಟಿನಲ್ಲಿ ವಾಸಮಾಡುತ್ತಿರುವಿರಿ. ಈಗ ಈಜಿಪ್ಟಿನ ಸುಳ್ಳುದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿ ನನಗೆ ಕೋಪ ಬರುವಂತೆ ಮಾಡುತ್ತಿರುವಿರಿ. ನೀವೇ ನಿಮ್ಮನ್ನು ನಾಶಮಾಡಿಕೊಳ್ಳುವಿರಿ. ಅದು ನಿಮ್ಮ ತಪ್ಪೇ ಆಗುವುದು. ಬೇರೆ ಜನಾಂಗದವರು ನಿಂದಿಸುವಂತೆ ನಿಮ್ಮನ್ನು ನೀವು ಮಾಡಿಕೊಳ್ಳುತ್ತಿದ್ದೀರಿ. ಭೂಮಂಡಲದ ಎಲ್ಲಾ ಜನಾಂಗಗಳು ನಿಮ್ಮನ್ನು ತಮಾಷೆ ಮಾಡುವಂತಾಗುವುದು.
“ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೀಗೆಂದನು: ‘ನಾನು ಜೆರುಸಲೇಮಿನ ಮೇಲೆ ನನ್ನ ಕೋಪವನ್ನು ತೋರಿಸಿದೆ. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ನಾನು ದಂಡಿಸಿದೆ. ಅದೇ ರೀತಿ, ಈಜಿಪ್ಟಿಗೆ ಹೋಗುವವರೆಲ್ಲರ ಮೇಲೂ ನಾನು ನನ್ನ ಕೋಪವನ್ನು ತೋರಿಸುವೆನು. ಬೇರೆಯವರಿಗೆ ಕೆಟ್ಟದಾಗಲಿ ಎಂದು ಹೇಳಬೇಕಾದಾಗ ಜನರು ನಿಮ್ಮಂತೆ ಆಗಲಿ ಎಂದು ನಿಮ್ಮ ಉದಾಹರಣೆಯನ್ನು ಕೊಡುವರು. ನೀವು ಒಂದು ಶಾಪದ ಶಬ್ದವಾಗುವಿರಿ. ಜನರು ನಿಮ್ಮಿಂದ ನಾಚಿಕೆಪಟ್ಟುಕೊಳ್ಳುವರು. ಜನರು ನಿಮ್ಮನ್ನು ಅಪಮಾನ ಮಾಡುವರು. ಯೆಹೂದವನ್ನು ಪುನಃ ನೀವು ಎಂದೂ ನೋಡುವದಿಲ್ಲ.’
ಇನ್ನೂ ಜೆರುಸಲೇಮಿನಲ್ಲಿರುವ ಜನರಿಗೆ ಖಡ್ಗ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳಿಂದೊಡಗೂಡಿ ಬೆನ್ನಟ್ಟುವೆನು. ಆ ಜನರ ದುರ್ಗತಿಯನ್ನು ನೋಡಿ ಭೂಲೋಕದ ಸಮಸ್ತ ರಾಜ್ಯಗಳಿಗೆ ಭಯ ಉಂಟಾಗುವಂತೆ ಮಾಡುವೆನು. ಆ ಜನರನ್ನು ನಾಶಮಾಡುವೆನು. ನಡೆದ ವಿಷಯಗಳ ಬಗ್ಗೆ ಕೇಳಿ ಜನರು ಬೆರಗಾಗಿ ಸಿಳ್ಳುಹಾಕುವರು. ಯಾರಿಗಾದರೂ, ಕೇಡಾಗಲಿ ಎಂದು ಹೇಳಬೇಕಾದರೆ ಜನರು ಅವರ ಉದಾಹರಣೆಯನ್ನು ಕೊಡುವರು. ನಾನು ಅವರನ್ನು ಅಟ್ಟಿದ ಎಲ್ಲೆಡೆಯಲ್ಲಿಯೂ ಜನರು ಅವರನ್ನು ಅವಮಾನಗೊಳಿಸುವರು.