Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 89:31 - ಪರಿಶುದ್ದ ಬೈಬಲ್‌

31 ನಾನು ಆರಿಸಿಕೊಂಡ ರಾಜನ ಸಂತತಿಯವರು ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಮೀರಿ ನಡೆದರಾದರೆ ನನ್ನ ಶಾಸನಗಳನು I ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ನನ್ನ ವಿಧಿಗಳನ್ನು ಮೀರಿ ನನ್ನ ನೇಮಗಳನ್ನು ಪಾಲಿಸದೆಹೋದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಅವರು ನನ್ನ ತೀರ್ಪುಗಳನ್ನು ಮುರಿದು, ನನ್ನ ಆಜ್ಞೆಗಳನ್ನು ಕೈಗೊಳ್ಳದೆ ಹೋದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 89:31
5 ತಿಳಿವುಗಳ ಹೋಲಿಕೆ  

ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು; ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.


ನೀವು ಯೆಹೋವನನ್ನು ಬಿಟ್ಟು ಅನ್ಯದೇವರುಗಳ ಸೇವೆಮಾಡಿದರೆ ಆತನು ನಿಮಗೆ ಕೇಡನ್ನು ಬರಮಾಡುವನು. ಯೆಹೋವನು ನಿಮ್ಮನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯವನಾಗಿದ್ದಾನೆ. ಆದರೆ ನೀವು ಆತನಿಗೆ ವಿಮುಖರಾದರೆ ಆತನು ನಿಮ್ಮನ್ನು ನಾಶಮಾಡುತ್ತಾನೆ” ಅಂದನು.


ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ.


“ಆದರೆ ನೀನಾಗಲಿ ನಿನ್ನ ಮಕ್ಕಳಾಗಲಿ ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದರೆ, ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ಅನುಸರಿಸದಿದ್ದರೆ, ಅನ್ಯದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ನೀನು ಮಾಡಿದರೆ, ನಾನು ದಯಪಾಲಿಸಿರುವ ದೇಶವನ್ನು ಬಿಟ್ಟುಹೋಗುವಂತೆ ನಾನು ಇಸ್ರೇಲರನ್ನು ಬಲಾತ್ಕರಿಸುತ್ತೇನೆ. ಅನ್ಯಜನರಿಗೆ ಇಸ್ರೇಲರು ಉದಾಹರಣೆಯಾಗುತ್ತಾರೆ. ಅನ್ಯಜನರು ಇಸ್ರೇಲರನ್ನು ಅಪಹಾಸ್ಯ ಮಾಡುತ್ತಾರೆ. ನಾನು ಈ ಆಲಯವನ್ನು ಪವಿತ್ರವನ್ನಾಗಿಸಿದೆ. ಜನರು ನನ್ನನ್ನು ಗೌರವಿಸುವ ಸ್ಥಳ ಅದಾಗಿದೆ. ಆದರೆ ನೀನು ನನ್ನನ್ನು ಅನುಸರಿಸದೆ ಇದ್ದರೆ, ಆಗ ನಾನದನ್ನು ಧೂಳೀಪಟ ಮಾಡುತ್ತೇನೆ.


ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು