ಕೀರ್ತನೆಗಳು 86:8 - ಪರಿಶುದ್ದ ಬೈಬಲ್8 ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ. ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ I ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಯೆಹೋವ ದೇವರೇ, ದೇವರುಗಳಲ್ಲಿ ನಿಮ್ಮ ಹಾಗೆ ಯಾರೂ ಇಲ್ಲ. ನಿಮ್ಮ ಕೆಲಸಗಳ ಹಾಗೆ ಒಂದೂ ಇಲ್ಲ. ಅಧ್ಯಾಯವನ್ನು ನೋಡಿ |
ಬೇರೊಂದು ಜನಾಂಗದೊಳಗಿಂದ ಜನರನ್ನು ತನಗೋಸ್ಕರ ತೆಗೆದುಕೊಳ್ಳಲು ಬೇರೆ ಯಾವ ದೇವರಾದರೂ ಎಂದಾದರೂ ಪ್ರಯತ್ನಿಸಿದ್ದುಂಟೇ? ಇಲ್ಲ! ಆದರೆ ದೇವರಾದ ಯೆಹೋವನು ಇಂಥ ಮಹಾಕಾರ್ಯಗಳನ್ನು ಮಾಡುವುದನ್ನು ನೀವು ನೋಡಿದ್ದೀರಿ! ಆತನು ನಿಮಗೆ ತನ್ನ ಶಕ್ತಿಯನ್ನು, ಬಲವನ್ನು, ಅದ್ಭುತಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ತೋರಿಸಿದ್ದಾನೆ. ಆತನು ಈಜಿಪ್ಟಿನ ಮೇಲೆ ಬರಮಾಡಿದ ವಿಪತ್ತುಗಳನ್ನು ಮತ್ತು ಭಯಂಕರವಾದ ಘಟನೆಗಳನ್ನು ನೀವು ನೋಡಿದ್ದೀರಿ!
ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.