Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 74:2 - ಪರಿಶುದ್ದ ಬೈಬಲ್‌

2 ಬಹುಕಾಲದ ಹಿಂದೆ ನೀನು ಕೊಂಡುಕೊಂಡ ನಿನ್ನ ಜನರನ್ನು ಜ್ಞಾಪಿಸಿಕೊ. ನೀನು ನಮ್ಮನ್ನು ರಕ್ಷಿಸಿದೆ. ನಾವು ನಿನ್ನವರೇ. ನೀನು ವಾಸಿಸಿದ ಚೀಯೋನ್ ಪರ್ವತವನ್ನು ಜ್ಞಾಪಿಸಿಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು I ಸ್ಮರಿಸಿಕೊ ಸೊತ್ತಾಗಿ ನೀ ರಕ್ಷಿಸಿಕೊಂಡ ಗೋತ್ರವನು I ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡಿಸಿ ಸಂಪಾದಿಸಿಕೊಂಡ ನಿನ್ನ ಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್‍ಗಿರಿಯನ್ನು ಮರೆಯಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಪೂರ್ವಕಾಲದಲ್ಲಿ ನೀವು ಕೊಂಡುಕೊಂಡ ನಿಮ್ಮ ಜನರನ್ನೂ ನೀವು ವಿಮೋಚಿಸಿದ ನಿಮ್ಮ ಬಾಧ್ಯತೆಯನ್ನೂ ನೀವು ವಾಸಮಾಡಿದ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 74:2
27 ತಿಳಿವುಗಳ ಹೋಲಿಕೆ  

ಆದರೆ ಯಾಕೋಬ್ಯರ ದೇವರು ಆ ವಿಗ್ರಹಗಳಂತಲ್ಲ. ಆತನು ಸಮಸ್ತವನ್ನೂ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸ್ವಾಸ್ತ್ಯವಾದ ಜನಾಂಗ. “ಸರ್ವಶಕ್ತನಾದ ಯೆಹೋವ” ಎಂಬುದು ಆತನ ನಾಮಧೇಯ.


ಯೆಹೋವನ ಪಾಲು ಆತನ ಜನರೇ. ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.


ನಿನ್ನ ಭುಜಬಲವನ್ನು ಅವರು ಕಂಡು ಭಯಭೀತರಾಗುವರು. ಯೆಹೋವನ ಜನರು ದಾಟಿ ಹೋಗುವವರೆಗೆ, ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.


ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು ಪ್ರೀತಿಯಿಂದ ನಡೆಸುವೆ. ನಿನ್ನ ಬಲದಿಂದ ನೀನು ಈ ಜನರನ್ನು ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.


ಯೆಹೋವನು ಯಾಕೋಬನನ್ನು ಆರಿಸಿಕೊಂಡನು. ಇಸ್ರೇಲ್, ಆತನಿಗೆ ಸೇರಿದ್ದು.


ಆದರೆ ಯೆಹೋವನು ನಿಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ತನ್ನ ಸ್ವಕೀಯ ಪ್ರಜೆಯನ್ನಾಗಿ ಮಾಡಿಕೊಂಡಿರುತ್ತಾನೆ. ಕಬ್ಬಿಣವನ್ನು ಕರಗಿಸುವ ಬೆಂಕಿಯ ಕುಲುಮೆಯಂತಿದ್ದ ಈಜಿಪ್ಟಿನಿಂದ ನಿಮ್ಮನ್ನು ಎಳೆದು ತಂದು ತನ್ನ ವಿಶೇಷ ಜನಾಂಗವಾಗಿ ನಿಮ್ಮನ್ನು ತೆಗೆದುಕೊಂಡಿರುತ್ತಾನೆ. ಈಗ ನೀವು ಆತನ ಜನರಾಗಿದ್ದೀರಿ.


ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು: “ನೀನು ಕೊಲ್ಲಲ್ಪಟ್ಟವನಾದ್ದರಿಂದ, ಸುರುಳಿಯನ್ನು ತೆಗೆದುಕೊಂಡು, ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ. ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ, ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.


ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.


ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ.


ಆದರೆ ಯಾಕೋಬ್ಯರ ಸ್ವಾಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ. ಜನರು ದೇವರನ್ನು ಸೃಷ್ಟಿಸಲಿಲ್ಲ. ದೇವರು ತನ್ನ ಜನರನ್ನು ಸೃಷ್ಟಿಸಿದನು. ದೇವರು ಎಲ್ಲವನ್ನು ಸೃಷ್ಟಿಸಿದನು. ಆತನ ಹೆಸರು ಸರ್ವಶಕ್ತನಾದ ಯೆಹೋವನು.


ಯೆಹೋವನೇ, ನೀನು ನಮ್ಮನ್ನು ನಿನ್ನಿಂದ ದೂರ ಮಾಡಿರುವೆ. ನಾವು ನಿನ್ನನ್ನು ಹಿಂಬಾಲಿಸಬೇಕೆಂದರೂ ಹಾಗೆ ಆಗದಂತೆ ಅದನ್ನೇಕೆ ಕಷ್ಟಕರವಾಗಿ ಮಾಡಿರುವೆ? ಯೆಹೋವನೇ, ನಮ್ಮ ಬಳಿಗೆ ಹಿಂದಿರುಗಿ ಬಾ. ನಾವು ನಿನ್ನ ಸೇವಕರಾಗಿದ್ದೇವೆ. ನಮ್ಮ ಬಳಿಗೆ ಬಂದು ಸಹಾಯಮಾಡು. ನಮ್ಮ ಕುಟುಂಬಗಳು ನಿನ್ನವೇ.


ಜನರಿಗೆ ಅನೇಕ ತೊಂದರೆಗಳು ಪ್ರಾಪ್ತವಾಗಿದ್ದವು. ಆದರೆ ಯೆಹೋವನು ಅವರಿಗೆ ವಿರುದ್ಧನಾಗಿರಲಿಲ್ಲ. ಆತನು ಅವರನ್ನು ಪ್ರೀತಿಸಿ ಅವರಿಗಾಗಿ ಚಿಂತಿಸಿದನು; ತನ್ನ ವಿಶೇಷ ದೂತನನ್ನು ಕಳುಹಿಸಿ ಅವರನ್ನು ರಕ್ಷಿಸಿದನು. ಯೆಹೋವನು ಅವರನ್ನು ನಿತ್ಯಕಾಲಕ್ಕೂ ಸಲಹುವನು. ತನ್ನ ಜನರಿಗೆ ಯೆಹೋವನು ಸಲಹುವದನ್ನು ನಿಲ್ಲಿಸಲಿಲ್ಲ.


ಆತನ ಜನರು “ಪವಿತ್ರಜನ”ರೆಂದೂ, “ಯೆಹೋವನಿಂದ ರಕ್ಷಿಸಲ್ಪಟ್ಟವ”ರೆಂದೂ ಕರೆಯಲ್ಪಡುವರು. ಜೆರುಸಲೇಮ್, “ದೇವರಿಗೆ ಬೇಕಾದ ಪಟ್ಟಣ”ವೆಂದೂ, “ದೇವರಿರುವ ಪಟ್ಟಣ”ವೆಂದೂ ಕರೆಯಲ್ಪಡುವದು.


ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ. ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ. ಅವರು ಬಹಳ ಸಂತೋಷಪಡುವರು. ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು. ಅವರು ಹರ್ಷದಿಂದ ಹಾಡುವರು. ಅವರ ದುಃಖವೆಲ್ಲಾ ಬಹುದೂರವಾಗುವುದು.


ಆತನು ತನ್ನ ಜನರ ಮೇಲೆ ಕೋಪಗೊಂಡನು; ಅವರ ವಿಷಯದಲ್ಲಿ ಬೇಸರಗೊಂಡನು!


ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ. ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.


ಬಾಷಾನ್ ಪರ್ವತವೇ, ಚೀಯೋನ್ ಪರ್ವತವನ್ನು ನೀನು ಕೀಳಾಗಿ ಕಾಣುವುದೇಕೆ? ಯೆಹೋವನು ತನಗೆ ಪ್ರಿಯವಾದ ಚೀಯೋನ್ ಪರ್ವತವನ್ನೇ ತನ್ನ ಶಾಶ್ವತ ವಾಸಸ್ಥಾನವಾಗಿ ಆರಿಸಿಕೊಂಡಿದ್ದಾನೆ.


ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು. ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.


ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ. ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.


ಆದರೆ ಅವರು ನಿನ್ನ ಜನರಾಗಿದ್ದಾರೆ. ಅವರು ನಿನಗೆ ಸಂಬಂಧಪಟ್ಟವರಾಗಿದ್ದಾರೆ; ನಿನ್ನ ಬಲಪರಾಕ್ರಮದಿಂದ ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಿರುವೆ.’


‘ನನ್ನ ಒಡೆಯನೇ, ಯೆಹೋವನೇ, ನಿನ್ನ ಜನರನ್ನು ನೀನು ನಾಶಮಾಡಬೇಡ. ಅವರು ನಿನ್ನ ಜನಾಂಗ. ನಿನ್ನ ಪರಾಕ್ರಮದಿಂದ ನೀನು ಈಜಿಪ್ಟಿನಿಂದ ಅವರನ್ನು ಬಿಡಿಸಿ ಹೊರತಂದಿರುವೆ.


ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.


ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ. ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.


ಜೆರುಸಲೇಮೇ, ನಿನ್ನ ಗೋಡೆಯ ಮೇಲೆ ನಾನು ಕಾವಲುಗಾರರನ್ನು ಇಟ್ಟಿರುತ್ತೇನೆ. ಆ ಕಾವಲುಗಾರರು ಮೌನವಾಗಿರುವದಿಲ್ಲ. ಅವರು ಹಗಲಿರುಳು ಪ್ರಾರ್ಥಿಸುತ್ತಾ ಇರುವರು. ಕಾವಲುಗಾರರೇ, ನೀವು ಯೆಹೋವನಿಗೆ ಪ್ರಾರ್ಥಿಸುತ್ತಾ ಇರಬೇಕು. ಆತನ ವಾಗ್ದಾನಗಳನ್ನು ನೀವು ಆತನ ನೆನಪಿಗೆ ತರಬೇಕು. ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು