Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 73:20 - ಪರಿಶುದ್ದ ಬೈಬಲ್‌

20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು. ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ ನೀನು ಅವರನ್ನು ಮಾಯಗೊಳಿಸುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಎಚ್ಚರವಾದವನು ಕನಸನ್ನು ಹೇಗೋ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 73:20
6 ತಿಳಿವುಗಳ ಹೋಲಿಕೆ  

ಅವನು ಕನಸಿನಂತೆ ಹಾರಿಹೋಗುವನು, ಯಾರೂ ಅವನನ್ನು ಮತ್ತೆ ನೋಡುವುದಿಲ್ಲ, ರಾತ್ರಿಯ ಕೆಟ್ಟ ಕನಸಿನಂತೆ ಅವನನ್ನು ಅಟ್ಟಿಬಿಡಲಾಗುವುದು.


ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.


ನೀನು ನಮ್ಮನ್ನು ಗುಡಿಸಿಹಾಕುವೆ. ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ. ನಾವು ಹುಲ್ಲಿನಂತಿದ್ದೇವೆ.


ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ. ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ. ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು.


ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು! ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು. ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು