ಕೀರ್ತನೆಗಳು 68:29 - ಪರಿಶುದ್ದ ಬೈಬಲ್29 ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು ಜೆರುಸಲೇಮಿನ ನಿನ್ನ ಆಲಯಕ್ಕೆ ಬರುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ I ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಯೆರೂಸಲೇಮಿನ ನಿಮ್ಮ ಮಂದಿರದ ನಿಮಿತ್ತ ಅರಸರು ನಿಮಗೆ ಕಾಣಿಕೆಗಳನ್ನು ಸಮರ್ಪಿಸಲಿ. ಅಧ್ಯಾಯವನ್ನು ನೋಡಿ |
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನಿಗೆ ವಿಶೇಷವಾದ ಕಾಣಿಕೆಯು ಸಮರ್ಪಿಸಲ್ಪಡುವದು. ಆ ಕಾಣಿಕೆಯು ಉನ್ನತವಾಗಿರುವ ಬಲಶಾಲಿಗಳಾದ ಜನರಿಂದ ಬರುವದು. ಎಲ್ಲಾ ದೇಶಗಳ ಜನರು ಈ ಉನ್ನತವಾದ ಈ ಬಲಿಷ್ಠರಿಗೆ ಹೆದರುವರು. ಅವರು ಬಲಾಢ್ಯ ಜನಾಂಗವಾಗಿದ್ದಾರೆ. ಅವರ ಜನಾಂಗವು ಇತರ ಜನಾಂಗಗಳನ್ನು ಸೋಲಿಸುತ್ತದೆ. ಅವರ ದೇಶವು ನದಿಯ ಶಾಖೆಗಳಿಂದ ತುಂಬಿದೆ. ಈ ಕಾಣಿಕೆಯನ್ನು ಚೀಯೋನ್ ಪರ್ವತದಲ್ಲಿರುವ ಯೆಹೋವನ ಸ್ಥಳಕ್ಕೆ ತರುವರು.