ಕೀರ್ತನೆಗಳು 59:3 - ಪರಿಶುದ್ದ ಬೈಬಲ್3 ಇಗೋ, ನನ್ನನ್ನು ಕೊಲ್ಲಲು ಬಲಿಷ್ಠರು ಹೊಂಚುಹಾಕಿದ್ದ್ದಾರೆ. ಆದರೆ ನಾನು ಪಾಪವನ್ನಾಗಲಿ ಅಪರಾಧವನ್ನಾಗಲಿ ಮಾಡಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಇಗೋ, ಅವರು ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ; ಬಲಿಷ್ಠರು ನನಗೆ ವಿರುದ್ಧವಾಗಿ ಗುಂಪುಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು I ನನ್ನ ಮೇಲೆರಗಲು ಹೂಡಿರುವ ಕ್ರೂರಿಗಳ ಸಂಚು II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಇಗೋ, ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ; ಬಲಿಷ್ಠರು ನನಗೆ ವಿರೋಧವಾಗಿ ಗುಂಪು ಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ. ಅಧ್ಯಾಯವನ್ನು ನೋಡಿ |
ನನ್ನ ತಂದೆಯೇ, ನನ್ನ ಕೈಯಲ್ಲಿರುವ ಚೂರು ಬಟ್ಟೆಯನ್ನು ನೋಡು. ನಾನು ನಿನ್ನ ಅಂಗಿಯ ಮೂಲೆಯನ್ನು ಕತ್ತರಿಸಿಹಾಕಿದೆ. ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ! ನೀನು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೇನೆ. ನಾನು ನಿನ್ನ ವಿರುದ್ಧವಾಗಿ ಯಾವ ಸಂಚನ್ನೂ ಮಾಡುತ್ತಿಲ್ಲವೆಂದು ನೀನು ತಿಳಿದುಕೊಳ್ಳಬೇಕಾಗಿದೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ಆದರೆ ನೀನು ನನ್ನನ್ನು ಹುಡುಕುತ್ತಿರುವೆ; ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವೆ.