ಕೀರ್ತನೆಗಳು 55:3 - ಪರಿಶುದ್ದ ಬೈಬಲ್3 ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು. ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು. ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ, ಹೊಯ್ದಾಡುತ್ತಾ ನರಳುತ್ತಿದ್ದೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ, ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಶತ್ರುಗರ್ಜನೆಯಿಂದ, ದುರುಳರ ಹಿಂಸೆಯಿಂದ I ಅವರೆನಗೆ ಬರಮಾಡಿರುವ ಆತಂಕದಿಂದ I ದ್ವೇಷಿಸುತಿಹರೆನ್ನನು ಕೋಪಾವೇಶದಿಂದ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ ಹೊಯ್ದಾಡುತ್ತಾ ನರಳುತ್ತೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಶತ್ರುವಿನ ಗರ್ಜನೆಯಿಂದಲೂ ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ. ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ, ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ. ಅಧ್ಯಾಯವನ್ನು ನೋಡಿ |