ಕೀರ್ತನೆಗಳು 119:148 - ಪರಿಶುದ್ದ ಬೈಬಲ್148 ನಿನ್ನ ವಾಕ್ಯವನ್ನು ಧ್ಯಾನಿಸುವುದಕ್ಕಾಗಿ ರಾತ್ರಿಯಲ್ಲಿ ಬಹು ಹೊತ್ತಿನವರೆಗೆ ಎಚ್ಚರವಾಗಿದ್ದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019148 ನಿನ್ನ ನುಡಿಯನ್ನು ಧ್ಯಾನಿಸಲು, ನನ್ನ ಕಣ್ಣುಗಳು ಇರುಳಿನ ಒಂದೊಂದು ಜಾವದಲ್ಲೂ ತೆರೆದಿರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)148 ನಿನ್ನ ನುಡಿಯನು ಧ್ಯಾನಿಸಬೇಕೆಂದೇ I ಎಚ್ಚರಗೊಳ್ಳುವೆ ಇರುಳಿನ ಜಾವಕೆ ಮುಂದೆ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)148 ಇರುಳಿನ ಒಂದೊಂದು ಜಾವವನ್ನು ಮುಂಗೊಂಡು ನಿನ್ನ ನುಡಿಯನ್ನು ಧ್ಯಾನಿಸುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ148 ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ. ಅಧ್ಯಾಯವನ್ನು ನೋಡಿ |
ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ. ನಿಮ್ಮ ಹೃದಯವು ನೀರಿನಂತೆ ಹರಿಯಲಿ. ನಿಮ್ಮ ಹೃದಯಸಾರವನ್ನು ಯೆಹೋವನ ಸಮ್ಮುಖದಲ್ಲಿ ಹೊಯ್ದುಬಿಡಿರಿ. ನಿಮ್ಮ ಕೈಗಳನ್ನು ಮೇಲೆತ್ತಿ ಯೆಹೋವನಿಗೆ ಪ್ರಾರ್ಥಿಸಿರಿ. ನಿಮ್ಮ ಮಕ್ಕಳು ಬದುಕಲಿ ಎಂದು ಆತನನ್ನು ಕೇಳಿಕೊಳ್ಳಿರಿ. ಹಸಿವೆಯಿಂದ ಮೂರ್ಛೆಹೋಗುತ್ತಿದ್ದ ನಿಮ್ಮ ಮಕ್ಕಳ ಪ್ರಾಣ ಉಳಿಯಲಿ ಎಂದು ಆತನನ್ನು ಪ್ರಾರ್ಥಿಸಿರಿ. ಹಸಿವೆಯಿಂದ ಅವರು ನಗರದ ಎಲ್ಲ ಬೀದಿಗಳಲ್ಲಿ ಮೂರ್ಛೆಹೋಗುತ್ತಿದ್ದಾರೆ.