ಕೀರ್ತನೆಗಳು 108:11 - ಪರಿಶುದ್ದ ಬೈಬಲ್11 ದೇವರೇ, ನೀನು ನಮ್ಮನ್ನು ತ್ಯಜಿಸಿ, ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ದೇವಾ, ನೀ ನಮ್ಮನು ಕೈಬಿಟ್ಟಿರುವುದು ಸರಿಯೋ? I ನಮ್ಮ ಸೈನ್ಯಸಮೇತ ನೀ ಬರದೆ ಹೋದೆಯೋ? II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ? ಅಧ್ಯಾಯವನ್ನು ನೋಡಿ |
ಆಸನು ದೇವರಾದ ಯೆಹೋವನನ್ನು ಪ್ರಾರ್ಥಿಸಿ, “ಯೆಹೋವನೇ, ಬಲಹೀನರಾದವರು ಬಲಿಷ್ಠರಾದವರನ್ನು ಸೋಲಿಸಲು ನೀನೇ ಸಹಾಯಿಸಬೇಕು. ದೇವರಾದ ಯೆಹೋವನೇ, ನಮಗೆ ಸಹಾಯಮಾಡು. ನೀನೇ ನಮ್ಮ ರಕ್ಷಕನು. ನಾವು ನಿನ್ನ ಮೇಲೆ ಭರವಸವಿಟ್ಟಿರುತ್ತೇವೆ. ನಿನ್ನ ಹೆಸರಿನಲ್ಲಿ ನಾವು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿರುತ್ತೇವೆ. ಯೆಹೋವನೇ, ನೀನೇ ನಮ್ಮ ದೇವರು. ನಿನ್ನನ್ನು ಸೋಲಿಸಲು ಯಾರಿಗೂ ಅವಕಾಶಕೊಡಬೇಡ” ಎಂದು ಬೇಡಿಕೊಂಡನು.
ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು.