ಓಬದ್ಯ 1:8 - ಪರಿಶುದ್ದ ಬೈಬಲ್8 ಯೆಹೋವನು ಹೇಳುವುದೇನೆಂದರೆ, “ಆ ದಿವಸದಲ್ಲಿ ಎದೋಮಿನಲ್ಲಿರುವ ಬುದ್ಧಿವಂತರನ್ನು ನಾಶಮಾಡುವೆನು. ಏಸಾವಿನ ಪರ್ವತದಲ್ಲಿರುವ ಜಾಣರನ್ನು ನಾನು ನಾಶಮಾಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಯೆಹೋವನು ಇಂತೆನ್ನುತ್ತಾನೆ. “ಆ ದಿನದಲ್ಲಿ ನಾನು ಎದೋಮಿನೊಳಗೆ ಜ್ಞಾನಿಗಳನ್ನು ಅಳಿಸದೇ ಬಿಡುವೆನೋ,” ಏಸಾವನ ಪರ್ವತದೊಳಗಿಂದ ವಿವೇಕವನ್ನು ಕಿತ್ತುಹಾಕದೇ ಇರುವೆನೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಲ್ಲಿ ಎದೋಮಿನ ಜ್ಞಾನಿಗಳನ್ನೂ ಏಸಾವಿನ ಪರ್ವತದ ಬುದ್ಧಿಜೀವಿಗಳನ್ನೂ ನಾನು ಅಳಿಸದೆ ಬಿಡುವೆನೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನಾನು ಎದೋವಿುನೊಳಗಿಂದ ಜ್ಞಾನಿಗಳನ್ನು ಅಳಿಸದೆ ಬಿಟ್ಟೇನೋ? ಏಸಾವಿನ ಪರ್ವತದೊಳಗಿಂದ ವಿವೇಕವನ್ನು ಕಿತ್ತುಹಾಕದೆ ಇದ್ದೇನೋ? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ? ಅಧ್ಯಾಯವನ್ನು ನೋಡಿ |