ಓಬದ್ಯ 1:19 - ಪರಿಶುದ್ದ ಬೈಬಲ್19 ಆಗ ನೆಗೆವಿನ ಜನರು ಏಸಾವಿನ ಪರ್ವತಗಳಲ್ಲಿ ವಾಸಿಸುವರು. ಬೆಟ್ಟದ ಕೆಳಗೆ ವಾಸಿಸುವವರು ಫಿಲಿಷ್ಟಿಯರ ದೇಶವನ್ನು ಆಕ್ರಮಿಸುವರು. ಎಫ್ರಾಯೀಮ್ ಮತ್ತು ಸಮಾರ್ಯದ ಜನರು ಜೀವಿಸುವರು. ಗಿಲ್ಯಾದ್ ಪ್ರಾಂತ್ಯವು ಬೆನ್ಯಾಮೀನರಿಗೆ ಸೇರುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆಗ ದಕ್ಷಿಣ ಪ್ರಾಂತ್ಯದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು, ಇಳಕಲಿನ ಪ್ರದೇಶದವರು ಫಿಲಿಷ್ಟಿಯರನ್ನೂ, ಎಫ್ರಾಯೀಮಿನ ಭೂಮಿಯನ್ನೂ ಮತ್ತು ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು. ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಆಗ ದಕ್ಷಿಣವಲಯದವರು ಏಸಾವಿನ ಪರ್ವತವನ್ನು ಸ್ವಾಧೀನಪಡಿಸಿಕೊಳ್ಳುವರು. ಪಶ್ಚಿಮದ ಬಯಲು ಸೀಮೆಯವರು ಫಿಲಿಷ್ಟಿಯವನ್ನೂ ಎಫ್ರಯಿಮ್ ಮತ್ತು ಸಮಾರ್ಯದ ಭೂಮಿಯನ್ನೂ ವಶಪಡಿಸಿಕೊಳ್ಳುವರು. ಬೆನ್ಯಾಮಿನ ವಂಶಜರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆಗ ದಕ್ಷಿಣಪ್ರಾಂತದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು; ಇಳಕಲಿನ ಪ್ರದೇಶದವರು ಫಿಲಿಷ್ಟಿಯವನ್ನೂ ಎಫ್ರಾಯೀವಿುನ ಭೂವಿುಯನ್ನೂ ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು; ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರು ಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು. ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರು ಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು. ಅಧ್ಯಾಯವನ್ನು ನೋಡಿ |
ಜನರು ಹಣ ಕೊಟ್ಟು ಭೂಮಿಯನ್ನು ಕೊಂಡುಕೊಳ್ಳುವರು. ಅವರು ಕರಾರುಪತ್ರಗಳಿಗೆ ಸಹಿಹಾಕುವರು. ಜನರು ಕ್ರಯಪತ್ರಗಳಿಗೆ ಸಹಿ ಹಾಕುವದನ್ನು ಬೇರೆಯವರು ನೋಡುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಲ್ಲಿ ಜನರು ಪುನಃ ಹೊಲಗಳನ್ನು ಕೊಂಡುಕೊಳ್ಳುವರು. ಜೆರುಸಲೇಮಿನ ಸುತ್ತಲಿನ ಪ್ರದೇಶದಲ್ಲಿ ಅವರು ಹೊಲಗಳನ್ನು ಕೊಂಡುಕೊಳ್ಳುವರು. ಅವರು ಯೆಹೂದ ಪ್ರದೇಶದ ಊರುಗಳಲ್ಲಿಯೂ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶದಲ್ಲಿಯೂ ದಕ್ಷಿಣದ ಮರಳುಗಾಡಿನಲ್ಲಿಯೂ ಹೊಲಗಳನ್ನು ಕೊಂಡುಕೊಳ್ಳುವರು. ನಾನು ನಿಮ್ಮ ಜನರನ್ನು ನಿಮ್ಮ ಪ್ರದೇಶಕ್ಕೆ ಪುನಃ ಕರೆದುಕೊಂಡು ಬರುವದರಿಂದ ಹೀಗಾಗುವುದು.” ಇದು ಯೆಹೋವನ ನುಡಿ.
ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.