Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಓಬದ್ಯ 1:10 - ಪರಿಶುದ್ದ ಬೈಬಲ್‌

10 ನೀನು ನಾಚಿಕೆಯಿಂದ ಮುಚ್ಚಲ್ಪಡುವೆ, ನಿರಂತರಕ್ಕೂ ನಾಶವಾಗುವೆ. ಯಾಕೆಂದರೆ ನೀನು ನಿನ್ನ ಸಹೋದರನಾದ ಯಾಕೋಬನೊಂದಿಗೆ ಕ್ರೂರವಾಗಿ ನಡೆದುಕೊಂಡೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿಮಿತ್ತ ಅವಮಾನವು ನಿನ್ನನ್ನು ಕವಿಯುವುದು. ನಿತ್ಯನಾಶನಕ್ಕೆ ಗುರಿಯಾಗುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 “ನಿನ್ನ ತಮ್ಮನಾದ ಯಕೋಬನ ವಿರುದ್ಧ ನಡೆಸಿದ ಹಿಂಸಾಕೃತ್ಯಗಳಿಗಾಗಿ ನೀನು ಅವಮಾನಕ್ಕೊಳಗಾಗುವೆ. ನಿತ್ಯನಾಶನಕ್ಕೆ ಈಡಾಗುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿವಿುತ್ತ ಅವಮಾನವು ನಿನ್ನನ್ನು ಕವಿಯುವದು; ನಿತ್ಯನಾಶನಕ್ಕೆ ಈಡಾಗುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚುವುದು. ನೀನು ಎಂದೆಂದಿಗೂ ನಾಶವಾಗಿ ಹೋಗುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಓಬದ್ಯ 1:10
30 ತಿಳಿವುಗಳ ಹೋಲಿಕೆ  

ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಎದೋಮ್ಯರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಎದೋಮ್ ತನ್ನ ಸಹೋದರನಾದ ಇಸ್ರೇಲನ್ನು ಕತ್ತಿಯಿಂದ ಹತಿಸಿತು. ಎದೋಮ್ ಯಾವ ಕರುಣೆಯನ್ನೂ ತೋರಲಿಲ್ಲ. ಅದರ ಕೋಪವು ನಿರಂತರವಾಗಿ ಮುಂದುವರಿಯಿತು; ಕ್ರೂರಪ್ರಾಣಿಯಂತೆ ಇಸ್ರೇಲನ್ನು ಹರಿದುಹರಿದು ಹಾಕಿತು.


ನೀನು ನಿತ್ಯಕಾಲಕ್ಕೂ ಬರಿದಾಗಿರು. ಯಾರೂ ನಿನ್ನ ಪಟ್ಟಣಗಳಲ್ಲಿ ವಾಸಿಸರು. ಆಗ ನೀನು, ದೇವರಾದ ಯೆಹೋವನು ನಾನೇ ಎಂದು ತಿಳಿದುಕೊಳ್ಳುತ್ತಿ.”


ನೀನು ಅವನ ಜೀವಿತವನ್ನು ಮೊಟಕುಗೊಳಿಸಿ ಅವನಿಗೆ ಅವಮಾನ ಮಾಡಿದೆ.


ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.


ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು. ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ. ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.


“ನಿನ್ನ ದೇವರಾದ ಯೆಹೋವನು ಎಲ್ಲಿ?” ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಚಿಕೆಗೊಳ್ಳುವರು. ಆಗ ನಾನು ಅವರ ವಿಷಯವಾಗಿ ನಗಾಡುವೆನು; ರಸ್ತೆಯ ಮಣ್ಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡೆಯುವರು.


ಈಜಿಪ್ಟ್ ಬರಿದಾಗುವದು. ಎದೋಮು ಬೆಂಗಾಡಾಗುವದು. ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು. ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.


ಅವರು ಶೋಕಬಟ್ಟೆಗಳನ್ನು ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನ್ನು ಪ್ರದರ್ಶಿಸಲು ತಮ್ಮ ತಲೆಗಳನ್ನು ಬೋಳಿಸುವರು.


ಎದೋಮಿನ ಜನರೇ, ಸಂತೋಷವಾಗಿರಿ. ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ. ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು. ನೀವು ಆ ಪಾತ್ರೆಯಿಂದ ಕುಡಿಯುವಾಗ ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.


“ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು. ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ. ಏಕೆಂದರೆ ಯೆಹೋವನ ಆಲಯದ ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.”


ಯೆಹೋವನು ಹೀಗೆನ್ನುತ್ತಾನೆ, “ನನ್ನ ಸ್ವಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಬೊಚ್ರ ನಗರವನ್ನು ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಬ್ಬವಾಗುವುದು. ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಶಪಿಸುವಾಗ ಜನರು ‘ಬೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನ್ನು ಕೊಡುವರು. ಜನರು ಈ ನಗರವನ್ನು ಅವಮಾನ ಮಾಡುವರು. ಬೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶ್ವತವಾಗಿ ಹಾಳುಬೀಳುವವು.”


ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ. ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ. ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ. ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ. ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’” ಎಂದು ಮೊರೆಯಿಟ್ಟರು.


ನಾನು ಅವನ ಶತ್ರುಗಳಿಗೆ ನಾಚಿಕೆಯೆಂಬ ವಸ್ತ್ರವನ್ನು ಹೊದಿಸುವೆನು. ಅವನ ರಾಜ್ಯವನ್ನಾದರೋ ಅಭಿವೃದ್ಧಿಗೊಳಿಸುವೆನು.”


ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ! ನಾಚಿಕೆಯೇ ಅವರ ಮೇಲಂಗಿಯಾಗಲಿ.


ನಾಚಿಕೆಯು ನನ್ನ ಮುಖವನ್ನು ಕವಿದಿದೆ. ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.


ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ.


“ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ.


ಒಳ್ಳೆಯವನನ್ನು ಆಶೀರ್ವದಿಸುವಂತೆ ಜನರು ದೇವರನ್ನು ಪ್ರಾರ್ಥಿಸುವರು. ದುಷ್ಟನ ಮಾತುಗಳಲ್ಲಾದರೋ ಕುತಂತ್ರವೇ ಅಡಗಿಕೊಂಡಿದೆ.


ಎದೋಮ್ಯರ ಮತ್ತು ಈಜಿಪ್ಟಿನವರ ಮೂರನೆ ತಲೆಮಾರಿನವರು ಇಸ್ರೇಲರೊಂದಿಗೆ ದೇವಾರಾಧನೆ ಮಾಡಬಹುದು.


ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.


ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು.


ಚೀಯೋನೇ, ನಿನಗಾಗಬೇಕಿದ್ದ ದಂಡನೆಯು ಸಂಪೂರ್ಣವಾಯಿತು. ಮತ್ತೆ ನೀನು ಸೆರೆವಾಸಕ್ಕೆ ಹೋಗುವುದಿಲ್ಲ. ಆದರೆ ಎದೋಮಿನ ಜನರೇ, ನಿಮ್ಮ ಪಾಪಗಳಿಗಾಗಿ ಯೆಹೋವನು ನಿಮ್ಮನ್ನು ದಂಡಿಸುವನು. ಆತನು ನಿಮ್ಮ ಪಾಪಗಳನ್ನು ಬಹಿರಂಗಪಡಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು