ಎಸ್ತೇರಳು 9:25 - ಪರಿಶುದ್ದ ಬೈಬಲ್25 ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಇದು ಅರಸನ ಮುಂದೆ ಬಂದಾಗ ಅವನು, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕಲ್ಪಿಸಿದ ಕುತಂತ್ರವು ಅವನ ತಲೆಯ ಮೇಲೆಯೇ ಬರಲಿ; ಅವನನ್ನೂ ಅವನ ಮಕ್ಕಳನ್ನೂ ಗಲ್ಲಿಗೆ ಹಾಕಬೇಕು” ಎಂದು ಪತ್ರದ ಮೂಲಕ ಅಪ್ಪಣೆಮಾಡಿದನಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಈ ವಿಷಯ ಅರಸನ ಕಿವಿಗೆ ಬಿದ್ದಾಗ, ಅವನು, ‘ಹಾಮಾನನು ಯೆಹೂದ್ಯರ ವಿರುದ್ಧ ಯೋಚಿಸಿದ ಕೇಡು ಅವನ ತಲೆಯ ಮೇಲೆಯೇ ಬರಲಿ. ಅವನನ್ನು ಅವನ ಮಕ್ಕಳನ್ನೂ ಗಲ್ಲಿಗೇರಿಸಿರಿ,’ ಎಂದು ಅಪ್ಪಣೆಮಾಡಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 (ಇದು ಅರಸನ ಮುಂದೆ ಬಂದಾಗ ಅವನು - ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಕಲ್ಪಿಸಿದ ಕುತಂತ್ರವು ಅವನ ತಲೆಯ ಮೇಲೆಯೇ ಬರಲಿ; ಅವನನ್ನೂ ಅವನ ಮಕ್ಕಳನ್ನೂ ಗಲ್ಲಿಗೆ ಹಾಕಬೇಕೆಂದು ಅಪ್ಪಣೆ ಮಾಡಿದನಷ್ಟೆ. ) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು; ಅಧ್ಯಾಯವನ್ನು ನೋಡಿ |
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”
ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು. ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು.