20 ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು.
20 ಮೊರ್ದೆಕೈಯು ಅಹಷ್ವೇರೋಷನ ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಎಲ್ಲಾ ಯೆಹೂದ್ಯರಿಗೆ, ಸಮೀಪದಲ್ಲೂ ದೂರದಲ್ಲೂ ಇದ್ದವರು ಎಲ್ಲರಿಗೂ ಪತ್ರಗಳ ಮುಖಾಂತರ ಈ ಕೆಳಕಂಡ ಸಂಗತಿಗಳನ್ನು ತಿಳಿಯಪಡಿಸಿದನು:
ಕೂಡಲೇ ರಾಜಲೇಖಕರನ್ನು ಕರೆಯಿಸಿ ಅವರಿಂದ ಮೊರ್ದೆಕೈ ಹೇಳಿದಂತೆ ರಾಜಾಜ್ಞೆಯನ್ನು ಸಾಮ್ರಾಜ್ಯದ ನಾನಾ ಭಾಷೆಗಳಲ್ಲಿ ಬರೆಯಿಸಲಾಯಿತು. ಹಿಂದೂಸ್ಥಾನದಿಂದ ಹಿಡಿದು ಇಥಿಯೋಪ್ಯದ ತನಕ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳ ಅಧಿಕಾರಿಗಳಿಗೆ, ಎಲ್ಲಾ ರಾಜ್ಯಪಾಲರಿಗೆ, ಜನನಾಯಕರಿಗೆ ಮತ್ತು ಯೆಹೂದ್ಯರಿಗೆ ಆಯಾ ಭಾಷೆಗಳ ಲಿಪಿಗಳಲ್ಲಿ ಮೂರನೇ ತಿಂಗಳಾದ ಸೀವಾನ್ ಮಾಸದ ಇಪ್ಪತ್ತಮೂರನೇ ದಿವಸದಲ್ಲಿ ಬರೆಯಿಸಲಾಯಿತು.
ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.
ಅಹಷ್ವೇರೋಷನು ತನ್ನ ರಾಜ್ಯದ ಎಲ್ಲಾ ಕಡೆಗಳಿಗೆ, ಎಲ್ಲಾ ಸಂಸ್ಥಾನಗಳಿಗೆ ಅವರವರ ಭಾಷೆಯಲ್ಲಿ ಪತ್ರಗಳನ್ನು ಬರೆಯಿಸಿ ರವಾನಿಸಿದನು. ಅವರವರ ಭಾಷೆಯಲ್ಲಿ ಬರೆದ ಪತ್ರದಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಸಂಸಾರವನ್ನು ಆಳಬೇಕು ಎಂಬುದಾಗಿ ಬರೆಯಲ್ಪಟ್ಟಿತ್ತು.
ಬಳಿಕ ಯೆಹೋವನು ಮೋಶೆಗೆ, “ಈ ಯುದ್ಧದ ಕುರಿತು ಬರೆ: ಜನರು ಇಲ್ಲಿ ನಡೆದದ್ದನ್ನು ಜ್ಞಾಪಿಸಿಕೊಳ್ಳುವಂತೆ ಈ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ನಾನು ಅಮಾಲೇಕ್ಯರನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡುವೆನೆಂದು ಯೆಹೋಶುವನಿಗೆ ಹೇಳಲು ಮರೆಯಬೇಡ” ಎಂದು ಹೇಳಿದನು.
ದೇಶದ ಎಲ್ಲಾ ಹಳ್ಳಿಗಳಲ್ಲಿದ್ದ ಯೆಹೂದ್ಯರು ಅದಾರ್ ತಿಂಗಳಿನ ಹದಿನಾಲ್ಕನೆಯ ದಿವಸವನ್ನು ಪೂರಿಮ್ ದಿವಸವನ್ನಾಗಿ ಆಚರಿಸಿದರು. ಹದಿನಾಲ್ಕನೆಯ ದಿವಸವು ಅವರಿಗೆ ಸಂತಸದ ಹಬ್ಬ. ಆ ದಿವಸ ಅವರು ಔತಣಮಾಡಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟು ಕಳುಹಿಸಿದರು.
ಚೀಟು ಹಾಕುವುದಕ್ಕೆ, “ಪೂರಿಮ್” ಎಂದು ಕರೆಯುತ್ತಿದ್ದುದರಿಂದ ಈ ಹಬ್ಬಕ್ಕೆ “ಪೂರಿಮ್” ಎಂದು ಹೆಸರಿಟ್ಟರು. ಮೊರ್ದೆಕೈ ಈ ಹಬ್ಬವನ್ನು ಆಚರಿಸಲು ಯೆಹೂದ್ಯರೆಲ್ಲರಿಗೆ ಪತ್ರದ ಮೂಲಕ ತಿಳಿಸಿದನು. ಅಂದಿನಿಂದ ಪ್ರತಿ ವರ್ಷ ಈ ಎರಡು ದಿನಗಳಲ್ಲಿ ಹಬ್ಬವನ್ನು ಆಚರಿಸುವ ಕ್ರಮವನ್ನು ಇಟ್ಟುಕೊಂಡರು.
ಹಾಗೆ, ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಮತ್ತು ಯೆಹೂದಿಯಾದ ಮೊರ್ದೆಕೈಯು ಈ ಪೂರಿಮ್ ಹಬ್ಬದ ಬಗ್ಗೆ ಒಂದು ಅಧಿಕೃತ ಪತ್ರವನ್ನು ಬರೆಯಿಸಿದರು. ಜನರು ಅವರ ಎರಡನೆಯ ಪತ್ರವನ್ನು ಸತ್ಯವೆಂದು ನಂಬುವ ಹಾಗೆ ರಾಜಮುದ್ರೆಯೊಂದಿಗೆ ಕಳುಹಿಸಿದರು.
ಯೆರೆಮೀಯನು ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆಯಾಳುಗಳಿಗೆ, ಅಂದರೆ ಹಿರಿಯನಾಯಕರಿಗೆ, ಯಾಜಕರಿಗೆ, ಪ್ರವಾದಿಗಳಿಗೆ ಮತ್ತು ಇನ್ನುಳಿದ ಸಮಸ್ತ ಜನರಿಗೆ ಪತ್ರವನ್ನು ಕಳುಹಿಸಿದನು. ಇವರನ್ನು ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳಾಗಿ ಕೊಂಡೊಯ್ದನು.