ಎಸ್ತೇರಳು 6:2 - ಪರಿಶುದ್ದ ಬೈಬಲ್2 ಆ ಸೇವಕನು ರಾಜನಿಗೆ ಪುಸ್ತಕದಿಂದ ಓದುತ್ತಾ ಹೋದನು. ರಾಜನನ್ನು ಕೊಲ್ಲುವ ಒಳಸಂಚಿನ ವಿಚಾರವನ್ನೂ ಕೇಳಿದನು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ರಾಜನನ್ನು ಕೊಲ್ಲಲು ಒಳಸಂಚು ಮಾಡಿದಾಗ ಮೊರ್ದೆಕೈಗೆ ಅದು ತಿಳಿದುಬಂತು. ಕೂಡಲೇ ಅವನು ಬೇರೆಯವರ ಮುಖಾಂತರ ಅರಸನಿಗೆ ತಿಳಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರೂ ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈ ಮುಖಾಂತರ ಬಯಲಿಗೆ ಬಂದ ಸಂಗತಿಯೂ ಅದರಲ್ಲಿ ಬರೆಯಲಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅರಸನನ್ನು ಕೊಲ್ಲಲು ದ್ವಾರಪಾಲಕರಾದ ಬಿಗೆತಾನ್, ತೆರೆಷ್ ಎಂಬಿಬ್ಬರು ರಾಜಕಂಚುಕಿಗಳು ಪಿತೂರಿ ನಡೆಸಿದ್ದ ಪ್ರಕರಣ ಹಾಗೂ ಅದು ಮೊರ್ದೆಕೈಯ ಮುಖಾಂತರ ತಿಳಿದುಬಂದ ಲಿಖಿತ ವಿಷಯ ಅದರಲ್ಲಿ ಸಿಕ್ಕಿದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ತೆರೆಷ್ ಎಂಬಿಬ್ಬರು ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈಯ ಮುಖಾಂತರ ಬೈಲಿಗೆ ಬಂದ ಸಂಗತಿಯೂ ಅದರಲ್ಲಿ ಸಿಕ್ಕಿದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಅದನ್ನು ಅರಸನ ಮುಂದೆ ತಂದು ಓದಿಸಿದಾಗ, ದ್ವಾರಪಾಲಕರಾಗಿದ್ದ ರಾಜಕಂಚುಕಿಯರಲ್ಲಿ ಇಬ್ಬರಾದ ಬಿಗೆತಾನನೂ ತೆರೆಷನೂ ಅರಸನಾದ ಅಹಷ್ವೇರೋಷನನ್ನು ಕೊಲ್ಲಬೇಕೆಂದು ಒಳಸಂಚುಮಾಡಿದ ಘಟನೆಯು ಬರೆದಿತ್ತು. ಮೊರ್ದೆಕೈಯು ಹೇಗೆ ಅದನ್ನು ಅರಸನಿಗೆ ತಿಳಿಸಿದನೆಂದು ಸಹ ಅದರಲ್ಲಿ ಬರೆದಿತ್ತು. ಅಧ್ಯಾಯವನ್ನು ನೋಡಿ |